ಸಂಘಟನಾತ್ಮಕ ಹೋರಾಟದಿಂದ ಸಮಾಜದ ಏಳಿಗೆ ಸಾಧ್ಯ

HUN-AUG-27-8(KUMBARA SANGHA PROGRAMME)
Published on

ಹುಣಸೂರು: ಸಂಘಟನಾತ್ಮಕ ಹೋರಾಟದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಶ್ರೀ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ಎಸ್.ಎಲ್.ವಿ. ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಸರ್ವಸದಸ್ಯರ ವಾರ್ಷಿಕ ವಹಾಸಭೆ ಹಾಗೂ ಮೈಸೂರಿನಲ್ಲಿ ನಡೆಯಲಿರುವ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಒಗ್ಗಟ್ಟು ಇಲ್ಲದ್ದಿರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ, ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡುವ ಮೂಲಕ ಏಳಿಗೆ ಸಾಧಿಸಬೇಕಿದೆ. ಸಂಘವು ಸ್ಥಾಪನೆಯಾಗಿ 75 ವರ್ಷವಾಗಿದ್ದು ಮೈಸೂರಿನಲ್ಲಿ ನಡೆಯಲಿರುವ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಬರುವುದರಿಂದ ಹುಣಸೂರಿನಿಂದ ಹೆಚ್ಚು ಕುಂಬಾರ ಸಮುದಾಯದವರು ಆಗಮಿಸಬೇಕು. ಕುಂಬಾರ ಸಮಾಜದ ಯಾವುದೇ ವ್ಯಕ್ತಿಗೆ ತೊಂದರೆ ಆದಲ್ಲಿ ಸಂಘವು ಅವರ ಪರವಾಗಿ ನಿಲ್ಲಲಿದೆ. ಮುಂದೆ ನಡೆಯಲಿರುವ ಜಾತಿಗಣತಿಯಲ್ಲಿ ಕುಂಬಾರ ಎಂದು ಜಾತಿ ಹೆಸರನ್ನು ನಮೂದಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್ ಮಾತನಾಡಿ, ಹುಣಸೂರಿನ 57 ಗ್ರಾಮಗಳಲ್ಲಿ ಕುಂಬಾರರು ವಾಸಿಸುತ್ತಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ. ಹುಣಸೂರು ನಗರದಲ್ಲಿ ಕುಂಬಾರರಿಗೆ ಸಮುದಾಯ ಭವನ ಅಗತ್ಯವಿದ್ದು ಶಾಸಕರು ನಿವೇಶನ ದೊರಕಿಸಿಕೊಡಬೇಕು, ತಾಲೂಕಿನ ಕುಂಬಾರರ ಸಂಘ ಸದೃಢವಾಗಿದ್ದು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಕುಂಬಾರ ಜನಾಂಗವು ಕೇತಲಾದೇವಿ, ಶಾತವಾಹನ, ಸರ್ವಜ್ಞ, ಕುಂಬಾರ ಗುಂಡಯ್ಯರಂತಹ ಮಹಾನೀಯರನ್ನು ಸಮಾಜಕ್ಕೆ ನೀಡಿದೆ. ನಮ್ಮ ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಕುಂಬಾರರಿದ್ದಾರೆ. ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕುಂಬಾರ ಸಮುದಾಯ ಒಗ್ಗಟ್ಟಿನಿಂದ ಇದ್ದಲ್ಲಿ ಉತ್ತಮ ಸ್ಥಾನಮಾನ ಪಡೆಯಬಹುದು ಎಂದರು.

ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಸಣ್ಣಶೆಟ್ಟಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಲೋಕೇಶ್, ಗೌರವಾಧ್ಯಕ್ಷ ಮಾದಶೆಟ್ಟಿ, ಉಪಾಧ್ಯಕ್ಷ ಬಸವರಾಜಶೆಟ್ಟಿ, ಖಜಾಂಚಿ ಎಸ್.ಸತೀಶ್, ಸಂಚಾಲಕ ಶ್ರೀನಿವಾಸ್, ನಿರ್ದೇಶಕರಾದ ಟಿ.ಎಸ್.ಪುಟ್ಟಶೆಟ್ಟಿ, ರಾಜಶೆಟ್ಟಿ, ಮಹದೇವಶೆಟ್ಟಿ, ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಪಿ.ವೆಂಕಟೇಶ್, ಜಿಲ್ಲಾ ಸಂಘದ ನಿರ್ದೇಶಕರಾದ ವಿಷ್ಣುವರ್ಧನ್, ವಿಶ್ವೇಶ್ವರ, ನಾಗರಾಜು, ಮೈಸೂರು ತಾಲೂಕು ಸಂಘದ ಅಧ್ಯಕ್ಷ ಬಾಲಕೃಷ್ಣ, ಕೆ.ಆರ್.ನಗರ ಅಧ್ಯಕ್ಷ ವೀರಭದ್ರಶೆಟ್ಟಿ, ಎಚ್.ಡಿ.ಕೋಟೆ ಅಧ್ಯಕ್ಷ ಗೋವಿಂದರಾಜು, ಕೆ.ಚಂದ್ರಶೆಟ್ಟಿ, ಬಸವರಾಜು, ನಾಗರಾಜಶೆಟ್ಟಿ, ವೈ.ಎಂ.ಶಶಿಕುಮಾರ್, ಮಂಜುನಾಥ್, ನಾರಾಯಣಪ್ಪ, ನಾಗರಾಜು, ಟಿ.ಜಿ.ರಂಗಸ್ವಾಮಿ, ಲಕ್ಷಣ, ನಾರಾಯಣಶೆಟ್ಟಿ, ಕೆ.ಸಿ.ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net