ಸಮೃದ್ಧ ಮಳೆಯ ಸಂಕೇತ ನೀಡಿದ ಪೂಜಾರಿ

The priest who gave the sign of abundant rain
ಚಡಚಣ ಪಟ್ಟಣದ ಸಂಗಮೇಶ್ವರ ಜಾತ್ರೆಯ ಅಂಗವಾಗಿ ನಡೆದ ಭವಿಷ್ಯದ ನುಡಿ ಕಾರ್ಯಕ್ರಮದಲ್ಲಿ ಪೂಜಾರಿ ಭವಿಷ್ಯ ನುಡಿ ಹೇಳಿದರು. ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಗಂಗಪ್ಪ ಪಾವಲೆ, ಬಾಬುಗೌಡ ಪಾಟೀಲ, ಅಶೋಕ ಕುಲಕರ್ಣಿ, ದೇವೆಂದ್ರಪ್ಪ ಪಾಟೀಲ, ಪ್ರಭಾಕರ ನಿರಾಳೆ ಇತರರಿದ್ದರು.
Published on

ಚಡಚಣ: ಪಟ್ಟಣದ ಸಂಗಮೇಶ್ವರ ಜಾತ್ರೆಯ ಅಂಗವಾಗಿ ನಡೆದ ಭವಿಷ್ಯದ ನುಡಿ ಹೇಳುವ ಕಾರ್ಯಕ್ರಮದಲ್ಲಿ ಪೂಜಾರಿ ಸಮೃದ್ಧ ಮಳೆಯ ಸಂಕೇತ ನೀಡಿದ್ದಾನೆ.

ಮುಂಗಾರಿ ಮಳೆ ಸಮೃದ್ಧಿಯಾಗಿರಲಿದೆ ಎಂದು 5 ಬೊಗಸೆ ನೀರನ್ನು ಚೆಲ್ಲಿದ್ದಾನೆ. ಆದರೆ ಹಿಂಗಾರು ಮಳೆಯ ಸಂಕೇತವಾಗಿ ನೀರು ತುಂಬಿದ ಮಣ್ಣಿನ ಕೊಡವನ್ನು ಒಡೆದಿದ್ದಾನೆ. ಈ ಘಟನೆಯನ್ನು ಭಕ್ತರು ಅನೇಕ ರೀತಿ ವಿಶ್ಲೇಷಿಸುತ್ತಿದ್ದಾರೆ.

ಕೆಲವರು ಹಿಂಗಾರಿ ಮಳೆ ವಾಡಿಕೆಗಿಂತ ಬಹಳಷ್ಟು ಹೆಚ್ಚಾಗಲಿದೆ ಎಂದು ಹೇಳಲು ಪೂಜಾರಿ ತುಂಬಿದ ಕೊಡ ಒಡೆದಿದ್ದಾನೆ ಎಂದು ಹೇಳಿದರೆ, ತುಂಬಿದ ಕೊಡ ಒಡೆಯುವದು ಅಶುಭ ಸಂಕೇತವಾಗಿದ್ದು ಹಿಂಗಾರಿ ಮಳೆ ಕಡಿಮೆಯಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ.

ಈ ಬಾರಿ ಭಕ್ತರ ಟೋಪಿಗಳನ್ನು ಬದಲಾಯಿಸದ ಪೂಜಾರಿ ಈ ವರ್ಷ ರಾಜಕೀಯದಲ್ಲಿ ಸ್ಥಿರತೆ ಇರಲಿದೆ ಎಂಬ ಭವಿಷ್ಯ ನುಡಿದಿದ್ದಾನೆ.

ಕೆಲವರ ಪ್ರಕಾರ ಮತ್ತೆ ದೇಶದ ಚುನಾವಣೆಯಲ್ಲಿ ಸದ್ಯ ಅಧಿಕಾರದಲ್ಲಿರುವರುವ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆಯಾಗಿದೆ ಎಂದಿದ್ದಾರೆ. ಜನ ದಾನ, ಧರ್ಮಗಳ ಕಾರ್ಯಕ್ರಮಗಳನ್ನು ಮಾಡುತ್ತ, ಜಾನುವಾರುಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸಿಕೊಂಡರೆ ಈ ವರ್ಷದ ಭವಿಷ್ಯ ಎಲ್ಲರಿಗೂ ಒಳ್ಳೆಯದಾಗಿರಲಿದೆ ಎಂದು ಹೇಳುವ ಮೂಲಕ ನುಡಿ ಕಾರ್ಯ ಸಂಪನ್ನಗೊಂಡಿತು.

ಕಾಂಗ್ರೆಸ್ ನಾಯಕಿ ಕಾಂತಾ ನಾಯಕ ಅವರನ್ನು ಸನ್ಮಾನಿಸಲಾಯಿತು. ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಗಂಗಪ್ಪ ಪಾವಲೆ, ಬಾಬುಗೌಡ ಪಾಟೀಲ, ಅಶೋಕ ಕುಲಕರ್ಣಿ, ದೇವೆಂದ್ರಪ್ಪ ಪಾಟೀಲ, ಪ್ರಭಾಕರ ನಿರಾಳೆ, ಮಲ್ಲಿಕಾರ್ಜುನ ಹಿಟ್ನಳ್ಳಿ, ದಯಾನಂದ ಜೀರಂಕಲಗಿ, ಸೋಮಶೇಖರ ಅವಜಿ, ಚಂದ್ರಶೇಖರ ಅವಜಿ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂಗಮೇಶ ಡೋಣಗಾಂವ, ಸಂಗಮೇಶ ಅವಜಿ, ಅಪ್ಪು ಗಿಡವೀರ, ಬಸವರಾಜ ಯಂಕಂಚಿ, ಡಾ. ಡಿ.ಬಿ. ಕಟಗೇರಿ, ಡಾ. ವಿ.ಎಸ್. ಪತ್ತಾರ, ಗುರುಬಾಳ ಗಿಡವೀರ, ಶ್ರೀಕಾಂತ ಗಂಟಗಲ್ಲ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net