More

    ಹೂವಿನಹಿಪ್ಪರಗಿಯಲ್ಲಿ ಕನ್ನಡ ರಥಯಾತ್ರೆ ಸಂಭ್ರಮ

    ಹೂವಿನಹಿಪ್ಪರಗಿ: ಪ್ರತಿಯೊಬ್ಬರೂ ಕನ್ನಡಾಭಿಮಾನ ಹೊಂದಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವಂತಾದಾಗ ಕನ್ನಡ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಬಸವನಬಾಗೇವಾಡಿ ತಾಲೂಕು ಗ್ರೇಡ್-2 ತಹಸೀಲ್ದಾರ್ ಗುರುರಾಜ ನಾಯಕ ಹೇಳಿದರು.

    ಹೂವಿನಹಿಪ್ಪರಗಿಯಲ್ಲಿ ತಾಯಿ ಭುವನೇಶ್ವರಿ ಹೊತ್ತ ಕನ್ನಡ ರಥ ಮೆರವಣಿಗೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನ ಇರಲಿ. ನಾಡಿನ ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.

    ಗ್ರಾಮದ ಡಾ.ಎಂ.ಜಿ. ಕೋರಿ. ಬಿ.ಜಿ. ಬ್ಯಾಕೋಡ ಪಿಯು ಮಹಾವಿದ್ಯಾಲಯದಲ್ಲಿ ರಥಯಾತ್ರೆಗೆ ಸ್ವಾಗತ ಕೋರಿ ಅಲ್ಲಿಂದ ಪ್ರಾರಂಭವಾದ ಮೆರವಣಿಗೆ ಪರಮಾನಂದ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಾಗಿತು. ವಿವಿಧ ಮಹನೀಯರ ವೇಷಭೂಷಣ ತೊಟ್ಟ ಶಾಲಾ ಮಕ್ಕಳು ಕಣ್ಮನ ಸೆಳೆದರು. ಹಲವು ಶಾಲೆಗಳ ವಿದ್ಯಾರ್ಥಿಗಳ ನೃತ್ಯ ಮೆರವಣಿಗೆಗೆ ಮೆರಗು ತಂದಿತು. ವಿವಿಧ ಕಲಾ ತಂಡಗಳು ನೋಡುಗರಿಗೆ ಆಕರ್ಷಿತವಾದವು. ಶಾಲಾ ಮಕ್ಕಳು ಹಿಡಿದಿದ್ದ ಬೃಹತ್ ಉದ್ದವಾದ ಕನ್ನಡ ಬಾವುಟ ಗಮನ ಸೆಳೆಯಿತು.

    ಗ್ರಾಪಂ ಅಧ್ಯಕ್ಷೆ ಶಿವುಬಾಯಿ ಗಿರಿನಿವಾಸ, ಉಪಾಧ್ಯಕ್ಷ ರಮೇಶ ಶಿವಯೋಗಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಉಪತಹಸೀಲ್ದಾರ್ ಎಸ್.ಕೆ.ಪಾಟೀಲ, ಕಂದಾಯ ನಿರೀಕ್ಷಕ ವಿ.ಜಿ.ಸಿಂದಗಿ, ಕೃಷಿ ಅಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ, ವೈದ್ಯಾಧಿಕಾರಿ ಡಾ.ಬಿ.ಎಸ್.ಸಂದಿಮನಿ, ಶಿವಾನಂದ ಮಂಗಾನವರ, ಜಿ.ಎಸ್.ಶಿವಯೋಗಿ, ಗುರುರಾಜ ಹಳ್ಳೂರ, ಸಾವಿತ್ರಿ ಡೋಣಿಯವರ, ಹೀನಾಕೌಸರ ಪಟೇಲ, ರುದ್ರಗೌಡ ನರಸಲಗಿ, ರುಕ್ಮಣಿ ಹೆಳವರ, ನಿಂಗಣ್ಣ ಶಿವಯೋಗಿ, ಗ್ರಾಮ ಆಡಳಿತ ಅಧಿಕಾರಿ ಬಿ.ಬಿ.ಕಮತ, ಟಿ.ಬಿ.ಕುಮಟಗಿ, ಬಿಆರ್‌ಪಿ ಎಸ್.ಬಿ.ಬಾಗೇವಾಡಿ, ಸಿಆರ್‌ಸಿ ಸುಮಿತ್ರಾ ತೋಟದ, ಮಲ್ಲಿಕಾರ್ಜುನ ರಾಜನಾಳ, ಪ್ರಭು ಮೇಟಿ, ಸಿದ್ದು ಹಾದಿಮನಿ, ಆನಂದ ಕಾಖಂಡಕಿ, ಶರಣು ಹೂಗಾರ, ವೈ.ಬಿ.ಮಂಗ್ಯಾಳ, ಸೋಮಶೇಖರ ಸಜ್ಜನ, ಬಿ.ಟಿ.ದೊಡಮನಿ, ಪಿ.ವೈ. ರತ್ನಾಕರ, ಭಿಮಣ್ಣ ಗಿರಿನಿವಾಸ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts