More

    ತಾಯಂದಿರು ದೇಶದ ಸಂಸ್ಕೃತಿ ಪರಿಚಯಿಸಿ

    ಹನುಮಸಾಗರ: ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಜತೆಗೆ ಸಂಸ್ಕಾರ ಕಲಿಸಬೇಕು ಎಂದು ಬಸವನಬಾಗೇವಾಡಿ ಯರ್ನಾಳ ಹಿರೇಮಠದ ಶಿವಪ್ರಸಾದ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರಿ ಕರಿಸಿದ್ದೇಶ್ವರ ಮಠದಲ್ಲಿ ಜಾತ್ರೆ ನಿಮಿತ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾತೃ ಸ್ವರೂಪಕ್ಕಿಂತ ಮೀಗಿಲಾದ ಸ್ಥಾನ ಇನ್ನೊಂದಿಲ್ಲ. ತಾಯಂದಿರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.

    ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತೇರದಾಳದ ಶಿವಕುಮಾರ, ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ, ಪ್ರಮುಖರಾದ ಕರಿಸಿದ್ದಪ್ಪ ಕುಷ್ಟಗಿ, ವಿಶ್ವನಾಥ ಕನ್ನೂರ, ರಾಚಪ್ಪ ಚಿನಿವಾಲರ, ಪ್ರಶಾಂತ ಗಡಾದ, ಮಹಾಂತೇಶ ಅಗಸಿಮುಂದಿನ, ಮಹೇಶ ಹುನಗುಂದ, ಮಲ್ಲಯ್ಯ ಕೋಮಾರಿ, ಈರಣ್ಣ ಹುನಗುಂಡಿ, ನಿಂಗಪ್ಪ ಮೋಟಗಿ, ಮಹಾಂತಯ್ಯ ಕೋಮಾರಿ, ಶರಣಪ್ಪ ಪಲ್ಲೇದ, ಸಿದ್ಧರಾಮಯ್ಯ ಕರಕಂಠಿಮಠ, ನಾಗಯ್ಯ ಹಿರೇಮಠ, ಮಲ್ಲಯ್ಯ ಕೋಮಾರಿ, ಶಂಭುಲಿಂಗಪ್ಪ ಚಿನಿವಾಲರ, ಚಂದಪ್ಪ ಅಗಸಿಮುಂದಿನ, ಶರಣಪ್ಪ ಹುಬ್ಬಳ್ಳಿ, ಬಸವರಾಜ ಚಿನಿವಾಲರ, ಮಲ್ಲಪ್ಪ ಲಂಗಟದ, ಸಂಗಪ್ಪ ಕಂಪ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts