More

    ಐದು ವರ್ಷ ಗ್ಯಾರಂಟಿ ಯೋಜನೆಗಳ ಮುಂದುವರಿಕೆ

    ಬಸವನಬಾಗೇವಾಡಿ: ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಲೋಕಸಭೆಯ ಚುನಾವಣೆಯ ನಂತರ ರದ್ದುಪಡಿಸುತ್ತಾರೆಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದ ತಾಳಿಕೋಟೆ ರಸ್ತೆಯ ಬಸ್ ಘಟಕದ ಪಕ್ಕದಲ್ಲಿರುವ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ, ಜಿಪಂ, ತಾಪಂ, ಗ್ರಾಪಂ ಸದಸ್ಯರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ಸರ್ಕಾರ ಪೂರ್ಣ ಐದು ವರ್ಷ ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಮುಂದುವರಿಸಲಿದೆ. ಸಂಸತ್ತಿನಲ್ಲಿ ಒಂದು ಪ್ರಶ್ನೆ ಮಾಡದೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ಇರುವಂತಹ ಜನಪ್ರತಿನಿಧಿಗಳಿಗೆ ಮತ ಹಾಕಿದರೆ ಏನು ಪ್ರಯೋಜನವಾಗುತ್ತದೆ ? ಪ್ರಧಾನಿ ಮೋದಿ ಅವರನ್ನು ನೋಡಿ ನೀವು ಮತ ನೀಡುವುದು ಬೇಡ. ನಿಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವಂಥವರಿಗೆ ನೀವು ಮತ ಹಾಕಬೇಕು ಎಂದರು.

    ಪ್ರಧಾನಿ ಮೋದಿ ಅವರು 2014 ರಿಂದ ಇಲ್ಲಿಯವರೆಗೆ ನಿರುದ್ಯೋಗ ಹೋಗಲಾಡಿಸಿಲ್ಲ. ಮಹಿಳೆಯರಿಗೆ ಒಳ್ಳೆಯ ಯೋಜನೆ ಜಾರಿ ಮಾಡಲಿಲ್ಲ. ಕೇವಲ ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಹೆಚ್ಚು ಒತ್ತು ನೀಡಿದರು. ರಾಮ ಮಂದಿರ ನಿರ್ಮಾಣ ಆಗಿರುವುದು ನಮಗೂ ಸಂತಸ ತಂದಿದೆ. ಆದರೆ ಅದರೊಂದಿಗೆ ಅವರು ನೀಡಿದ ಭರವಸೆಯಂತೆ ದೇಶದ ಯುವ ಜನರ ನಿರುದ್ಯೋಗ ಸಮಸ್ಯೆ ಏಕೆ ನಿವಾರಿಸಲಿಲ್ಲ ಎಂದು ಪ್ರಶ್ನಿಸಿದರು.

    ಬಸವನಬಾಗೇವಾಡಿಯನ್ನು ಕೂಡಲಸಂಗಮ ಪ್ರಾಧಿಕಾರದಿಂದ ಬೇರ್ಪಡಿಸಿ ಬಸವನಬಾಗೇವಾಡಿ ಪ್ರಾಧಿಕಾರ ರಚನೆಗೆ ಸಿಎಂ ಅವರ ಬಳಿ ನಿರಂತರವಾಗಿ ಮನವಿ ಮಾಡುತ್ತ ಬಂದಿದ್ದರಿಂದಾಗಿ ೆಬ್ರವರಿ ತಿಂಗಳ ಬಜೆಟ್‌ನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆಯಾಯಿತು. ಕ್ಷೇತ್ರದಲ್ಲಿ ಸಂಸದರ ವೈಫಲ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ ಗ್ಯಾರಂಟಿ ಯೋಜನೆಗಳು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.

    ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ರಫೀಕ ಪಕಾಲಿ, ಸಿ.ಪಿ.ಪಾಟೀಲ, ಸುರೇಶಗೌಡ ಪಾಟೀಲ, ಶೇಖರಗೌಡ ಪಾಟೀಲ (ಮನಗೂಳಿ), ಶಂಕರಗೌಡ ಬಿರಾದಾರ, ಕಮಲಸಾಬ ಕೊರಬು, ಶಿವನಗೌಡ ಗುಜಗೊಂಡ, ಮಲ್ಲಿರ್ಕಾನ ನಾಯಕ, ಸಂಗಮೇಶ ಓಲೇಕಾರ, ತಾನಾಜಿ ನಾಗರಾಳ, ಬಂದೇನವಾಜ ಡೊಲಚಿ, ಸಿದ್ದಣ್ಣ ನಾಗಠಾಣ, ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ, ರುಕ್ಮಿಣಿ ರಾಠೋಡ, ಮುರ್ತುಜ ಶಿರಬೂರ, ಸಂಗಮೇಶ ಬಳಗಾರ, ಬಸವರಾಜ ಸೋಮಪುರ, ಜಟ್ಟಿಂಗರಾಯ ಮಾಲಗಾರ ಇತರರಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts