ರೈತರ ಜಮೀನು ಕಬಳಿಸುವ ಹುನ್ನಾರ

26 KKP 1
Published on

ಹೊಂಗಾಣಿದೊಡ್ಡಿ ಗ್ರಾಮಸ್ಥರ ಆರೋಪ | ಶಾಸಕ ಇಕ್ಬಾಲ್​ ಹುಸೇನ್​ ವಿರುದ್ಧ ಪ್ರತಿಭಟನೆ

ಕನಕಪುರ: ತಾಲೂಕಿನ ಅಚ್ಚಲು ಗ್ರಾಪಂ ವ್ಯಾಪ್ತಿಯ ಹೊಂಗಾಣಿದೊಡ್ಡಿ ರೈತರನ್ನು ಒಕ್ಕಲೆಬ್ಬಿಸಿ ಅವರ ಜಮೀನನ್ನು ಕಬಳಿಸಲು ಶಾಸಕ ಇಕ್ಬಾಲ್​ ಹುಸೇನ್​ ಯತ್ನಿಸುತ್ತಿದ್ದಾರೆಂದು ಆರೋಪಿಸಿ ಗುರುವಾರ ಗ್ರಾಮಸ್ಥರು ರಾಜ್ಯ ರೈತ ಸಂದ ನೇತೃತ್ವದಲ್ಲಿ ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಲೂಕು ಕಚೇರಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ೂಷಣೆ ಕೂಗಿ, ಆಕ್ರೋಶ ವ್ಯಕ್ತಪಿಡಿದರಲ್ಲದೆ ಇಕ್ಬಾಲ್​ ಹುಸೇನ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಪತಹಸೀಲ್ದಾರ್​ ಮನೋಹರ್​ ಸವರಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂದ ಅಧ್ಯಕ್ಷ ನಂಜೇಗೌಡ ಮಾತನಾಡಿ, ನೂರಾರು ವರ್ಷಗಳಿಂದ ಹೊಂಗಾಣಿದೊಡ್ಡಿ ಗ್ರಾಮ ಹಾಗೂ ರೈತರ ಅನುಭೋಗದಲ್ಲಿರುವ ಜಮೀನನ್ನು ಶಾಸಕರು ಅಕ್ರಮವಾಗಿ ಹೆಸರಿಗೆ ಬರೆಸಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ಅಧಿಕಾರದ ಮದದಲ್ಲಿ ಕೊಲೆ ಪ್ರಕರಣಕ್ಕೆ ರೈತರನ್ನು ಸಿಲುಕಿಸಿ, ಜಮೀನುಗಳಿಗೆ ಬೇಲಿ ಹಾಕುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸದಿದ್ದರೆ ರಾಜ್ಯ ರೈತ ಸಂ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಸಂದ ಜಿಲ್ಲಾ ಮುಖಂಡ ಹರೀಶ್​ ಮಾತನಾಡಿ, ಹೊಂಗಾಣಿದೊಡ್ಡಿಯ ವಿವಾದವನ್ನು ಬಗೆಹಸರಿಸಲಾಗದೆ ಅಧಿಕಾರಿಗಳು ಹಾಗೂ ಪೊಲೀಸರು ಕಾಂಗ್ರೆಸ್​ ಮುಖಂಡರ ಅಣತಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಜನಜೀವನ ಕಷ್ಟವಾಗಿದೆ. ಜಿಲ್ಲಾಧಿಕಾರಿಗಳಾಗಲಿ, ಪೊಲೀಸ್​ ವರಿಷ್ಠಾಧಿಕಾರಿಗಳಾಗಲಿ ಗ್ರಾಮದಲ್ಲಿ ಶಾಂತಿಸಭೆ ನಡೆಸದೆ ರ್ನಿಲಕ್ಷ$್ಯ ತೋರಿದ್ದು, ಪರಿಣಾಮ ಕೆಲವರು ಊರು ಬಿಟ್ಟು ಎಲ್ಲೆಂದರಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಭೂಸುಧಾರಣಾ ಕಾಯ್ದೆಯಡಿ ಭೂಮಿ ಹಂಚಿಕೆ: ಅಚ್ಚಲು ಗ್ರಾಮದ ಸೈಯದ್​ ಬಸ್​ ಸಾಬ್​ ಅವರ 140 ಎಕರೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ರೈತರು ಪಾಲು ಮತ್ತು ಗುತ್ತಿಗೆ ಆಧಾರದ ಮೇಲೆ ಸಾಗುವಳಿ ಮಾಡುತ್ತಿದ್ದರು. 1974ರಲ್ಲಿ ಭೂಸುಧಾರಣಾ ಕಾಯ್ದೆಯಡಿ ಅಲ್ಲಿನ 31 ಕುಟುಂಬಗಳಿಗೆ 140 ಎಕರೆ ಜಮೀನು ಹಂಚಿಕೆಯಾಗಿತ್ತು. ಅದರಂತೆ ರೈತರು ಜಮೀನಿನ ಅನುಭೋಗದಲ್ಲಿ ಜೀವನ ನಡೆಸುಕೊಂಡು ಬರುತ್ತಿದ್ದಾರೆ. ಈ ಮಧ್ಯೆ ಭೂಮಾಲೀಕರಿಂದ ಶಾಸಕರು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲೂಕು ಗ್ರಾಮಾಂತರ ಅಧ್ಯಕ್ಷ ಕೆ.ಪಿ.ಕುಮಾರ್​, ಸಂದ ಮುಖಂಡ ಸಂಪತ್​ಕುಮಾರ್​, ಸಾಮಾಜಿಕ ಹೋರಾಟಗಾರ ಅಚ್ಚಲು ಶಿವರಾಜ್​ ಇತರರು ಆರೋಪಿಸಿದರು.

ಬೆದರಿಕೆ ಸಲ್ಲ: ಗ್ರಾಮದಲ್ಲಿ ವೈಯಕ್ತಿಕ ವಿಚಾರಕ್ಕೆ ಕಾಂಗ್ರೆಸ್​ ಮುಖಂಡನ ಹತ್ಯೆಯಾದರೆ ಆ ಪ್ರಕರಣದಲ್ಲಿ ರೈತರನ್ನು ಸಿಲುಕಿಸಿ ಬೆದರಿಕೆ ಹಾಕಲಾಗಿದೆ. ಇದರಿಂದ ಗ್ರಾಮದ ಜನ ಪೊಲೀಸರಿಗೆ ಹೆದರಿ ಗುಳೆ ಹೋಗಿದ್ದಾರೆ. ಈ ಸಂದರ್ಭವನ್ನೇ ಕಾಯುತ್ತಿದ್ದ ಕೆಲ ಕಾಂಗ್ರೆಸ್​ ಮುಖಂಡರು ರೈತರ ಜಮೀನುಗಳಿಗೆ ಬೇಲಿ ಹಾಕಿದ್ದಾರೆ. ಪ್ರಕರಣ ಹೈಕೋರ್ಟ್​ನಲ್ಲಿದ್ದರೂ ಭೂಸುಧಾರಣಾ ಕಾಯ್ದೆ ನಿಯಮ ಗಾಳಿಗೆ ತೂರಿ ಶಾಸಕರ ಪರ ಜಿಲ್ಲಾಡಳಿತ ಹಾಗೂ ಪೊಲೀಸ್​ ಅಧಿಕಾರಿಗಳ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬಿ.ನಾಗರಾಜು ಎಚ್ಚರಿಸಿದರಲ್ಲದೇ ಗ್ರಾಮ ತೊರೆದು ಹೋಗಿರುವ ರೈತರು ಪುನ@ ಗ್ರಾಮದಲ್ಲಿ ನೆಲಸುವಂತೆ ಮಾಡಬೇಕು. ಅ.2ರಂದು ರಾಜ್ಯ ರೈತ ಸಂದಿಂದ ಹೊಂಗಾಣಿದೊಡ್ಡಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಗುವುದು. ಆ ವೇಳೆ ಅನಾಹುತ, ಗಲಾಟೆ ಗದ್ದಲ ನಡೆದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net