ಪೇಂಟಿಂಗ್​ ಮಾಡುತ್ತಿದ್ದವನಿಗೆ ಇರಿತ

stabbed
Published on

ಕಾಸರಗೋಡು: ಹೊಸದಾಗಿ ಆರಂಭಿಸಲಾಗುವ ಅಂಗಡಿಯ ಪೈಂಟಿಂಗ್​ ಕೆಲಸದಲ್ಲಿ ನಿರತನಾಗಿದ್ದ ಯುವಕನೋರ್ವನನ್ನು ದುಷ್ಕರ್ಮಿಯೋರ್ವ ಇರಿದು ಗಾಯಗೊಳಿಸಿದ ಟನೆ ಕೂಡ್ಲು ಮೀಪುಗುರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಕೂಡ್ಲು ಎರಿಯಾಲ್​ ನಿವಾಸಿ ಬಾಸಿತ್​(25) ಇರಿತಕ್ಕೊಳಗಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಟನೆ ವೇಳೆ ಅಂಗಡಿಯಲ್ಲಿದ್ದ ಕೂಡ್ಲು ಎರಿಯಾಲ್​ ಬ್ಲಾಕೋರ್ಡ್​ ಹೌಸ್​ನ ಮೊಹಮ್ಮದ್​ ಅಸೀಫ್​ ಸಹೀರ್​(22) ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಾನು ಮತ್ತು ಸ್ನೇಹಿತ ಬಾಸಿತ್​ ಸೇರಿ ಮೀಪುಗುರಿಯಲ್ಲಿ ಹೊಸ ಅಂಗಡಿಯೊಂದನ್ನು ಆರಂಭಿಸಲು ತೀರ್ಮಾನಿಸಿದ್ದು, ಅದರಂತೆ ಆ ಅಂಗಡಿಯ ಪೈಂಟಿಂಗ್​ ಕೆಲಸ ಬುಧವಾರ ರಾತ್ರಿಯಿಂದ ನಡೆಸಲಾಗುತ್ತಿತ್ತು.

ಗುರುವಾರ ಮುಂಜಾನೆ ಯುವಕನೋರ್ವ ಅಲ್ಲಿಗೆ ಬಂದು ಅಂಗಡಿ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಚಾಕುವಿನಿಂದ ಸ್ನೇಹಿತ ಬಾಸಿತ್​ನತ್ತ ಬೀಸಿದ್ದಾನೆ. ಆಗ ಅದನ್ನು ನಾನು ತಡೆದಾಗ ಅದು ಬಾಸಿತ್​ ಎಡ ಕೈಗೆ ತಗುಲಿ ಗಂಭೀರ ಗಾಯ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net