

ಕಾಸರಗೋಡು: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ಮುಳ್ಳೇರಿಯದ ಯುವಕನೋರ್ವ ಆತ್ಮಹತ್ಯೆಗೈಯ್ಯಲೆತ್ನಿಸಿ ಅದನ್ನು ಕಂಡ ಮೀನುಗಾರರಿಬ್ಬರು ಸೇರಿ ಆತನನ್ನು ರಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ಬುಧವಾರ ನಡೆದಿದೆ.
ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಈ ಟನೆ ನಡೆದಿದೆ. ಬೈಕ್ನಲ್ಲಿ ಬಂದ ಮುಳ್ಳೇರಿಯ ನಿವಾಸಿಯಾದ ಯುವಕ ಬೈಕ್ ಸೇತುವೆಯಲ್ಲಿ ನಿಲ್ಲಿಸಿ ಪರ್ಸ್, ಮೊಬೈಲ್ ಬೈಕ್ ಮೇಲೆ ಇರಿಸಿ ಸೇತುವೆಯ ಮಧ್ಯ ಭಾಗದಿಂದ ಹೊಳೆಗೆ ಹಾರಿದ್ದಾನೆ. ಅದನ್ನು ಕಂಡ ಹೊಳೆಯಲ್ಲಿ ಕಿರು ದೋಣಿಯಲ್ಲಿ ಮೀನು ಹಿಡಿಯುತ್ತಿದ್ದ ಚೆಮ್ಮನಾಡಿನ ಸಲೀಂ ಮತ್ತು ಮೊಹಮ್ಮದ್ ರೈಮು ತಕ್ಷಣ ಹೊಳೆಗೆ ಧುಮುಕಿ ನೀರಿನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಯುವಕನನ್ನು ನೀರಿನಿಂದ ಮೇಲಕ್ಕೆತ್ತಿ ತಮ್ಮ ದೋಣಿಯಲ್ಲಿ ದಡಕ್ಕೆ ಸಾಗಿಸಿದ್ದಾರೆ.
ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದೆನೆಂದೂ ತಾನು ಹೊಳೆಗೆ ಹಾರಿದ ವಿಷಯವನ್ನು ಮನೆಯವರಿಗೆ ತಿಳಿಸಬಾರದೆಂದು ಆ ಯುವಕ ತಿಳಿಸಿದ್ದನೆಂದು ಆತನನ್ನು ರಸಿದ ಸಲೀಂ ತಿಳಿಸಿದ್ದಾರೆ.