

ಕಾಸರಗೋಡು: ಮಹಿಳೆಯೊಂದಿಗೆ ಪ್ರೀತಿಯ ಸೋಗಿನಲ್ಲಿ ಪರಿಚಯಮಾಡಿಕೊಂಡು, ಆಕೆಯಿಂದ ಹತ್ತು ಪವನಿನ ಚಿನ್ನಾಭರಣ ಪಡೆದು, ನಂತರ ವಾಪಸ್ ನೀಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಮಾರ್ಕೆಟ್ ಸನಿಹದ ಕಾಟಿಕುಳಂ ನಿವಾಸಿ, ಯುವ ಕಾಂಗ್ರೆಸ್ ನೇತಾರ ಶನೀದ್ ಎಂಬಾತನನ್ನು ಕೋಯಿಕ್ಕೋಡ್ ವೈದ್ಯಕಿಯ ಕಾಲೇಜು ಠಾಣಾ ಪೊಲೀಸರು ಬಂಧಿಸಿದ್ದಾರೆ. ವೈದ್ಯಕಿಯ ಕಾಲೇಜು ಆಸ್ಪತ್ರೆ ಆಸುಪಾಸಿನ ಮಹಿಳೆಯನ್ನು ನಕಲಿಫೇಸ್ ಬುಕ್ ಮೂಲಕ ಪರಿಚಯಮಾಡಿಕೊಂಡು, ಪ್ರೀತಿಸುವುದಾಗಿ ತಿಳಿಸಿ ಆಕೆಯಿಂದ ಹತ್ತು ಪವನ್ ಚಿನ್ನಾಭರಣ ಪಡೆದಿದ್ದ. ನಂತರ ಚಿನ್ನ ವಾಪಸ್ ನೀಡದೆ ವಂಚಿಸಿರುವ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಈತನನ್ನು ಬಂಧಿಸಲಾಗಿದೆ.