ಸಮಾವೇಶಕ್ಕೆ ಬಂದವ ನಾಪತ್ತೆ

ಸಮಾವೇಶಕ್ಕೆ ಬಂದವ ನಾಪತ್ತೆ
Published on

ಸಾಲಿಗ್ರಾಮ: ಜುಲೈ 19ರಂದು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ತೆರಳಿದ ವ್ಯಕ್ತಿ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ಸಾಲಿಗ್ರಾಮ ಠಾಣೆಗೆ ದೂರು ನೀಡಿದ್ದಾರೆ.

ತಾಲೂಕಿನ ಮಿರ್ಲೆ ಹೋಬಳಿಯ ಭೇರ್ಯ ಸಮೀಪದ ಕಾವಲು ಹೊಸೂರ್ ಗ್ರಾಮದ ಹುಚ್ಚೇಗೌಡ ಅವರ ಪುತ್ರ ನಾಗರಾಜು (43) ಜುಲೈ 19 ರಂದು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ತೆರಳಿದ್ದರು. ಆದರೆ, ಇದುವರೆಗೆ ಹಿಂದಿರುಗಿಲ್ಲ ಎಂದು ಸಹೋದರ ಚಂದ್ರೇಗೌಡ ದೂರು ನೀಡಿದ್ದಾರೆ. ಸುಳಿವು ಸಿಕ್ಕವರು ಪೊಲೀಸ್‌ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net