ಸಾಮಾಜಿಕ ನ್ಯಾಯದ ಪರಿಪೂರ್ಣ ಹೋರಾಟಗಾರ

ಜನ್ಮದಿನಾಚರಣೆ ಕಾರ್ಯಕ್ರಮ
ಜನ್ಮದಿನಾಚರಣೆ ಕಾರ್ಯಕ್ರಮ
Published on

ಪಡುಬಿದ್ರಿ: ದಿ.ದೇವರಾಜ ಅರಸು ಸಾವಾಜಿಕ ನ್ಯಾಯದ ಪರಿಪೂರ್ಣ ಹೋರಾಟಗಾರರಾಗಿದ್ದು, ಹಿಂದುಳಿದ ವರ್ಗ, ದಲಿತ, ಬಡ ಜನರ ಕಲ್ಯಾಣಕ್ಕಾಗಿ ತಾವು ವಾಡಿದ ಅಸಾಧಾರಣ ಕೆಲಸಗಳನ್ನು ಇಂದಿಗೂ ಜನತೆ ನೆನಪಿಸುತ್ತಿದ್ದಾರೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುವಾರ್ ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜೀವ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ, ವಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜೀವ್ ಗಾಂಧಿ ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಗರಾಗಿದ್ದು, ಮಾಹಿತಿ ತಂತಜ್ಞಾನ, ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ದಾರಿ ತೆರೆದವರು. ಯುವಕರಿಗೆ ನಂಬಿಕೆ ಇಟ್ಟು ಹೊಸ ಭಾರತದ ಕನಸನ್ನು ತೋರಿಸಿದ ನಾಯಕರಾಗಿದ್ದರು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ರಕ್ಷಣಾಪುರ ಜವನೆರ್ ಕಾಪು ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ದೀಪಕ್ ಎರ್ವಾಳ್, ಪ್ರಮುಖರಾದ ಸುನೀಲ್ ಡಿ.ಬಂಗೇರ, ಕೇಶವ್ ಸಾಲಿಯಾನ್, ಪ್ರಭಾಕರ್ ಆಚಾರ್ಯ, ಅಶ್ವಿನಿ ಬಂಗೇರ, ಸತೀಶ್ ಚಂದ್ರ, ಗಣೇಶ್ ಎನ್.ಕೋಟ್ಯಾನ್, ರಮೀಜ್ ಹುಸೇನ್, ಸುಧೀರ್, ದೇವರಾಜ್, ರಾಧಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net