ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಳದಲ್ಲಿ ಪ್ರಾಯಶ್ಚಿತ್ತಾದಿ ಕಾರ್ಯಕ್ರಮ

hbr (3)
Published on

ಹೆಬ್ರಿ: ಪೆರ್ಡೂರು ಮಹಾತೋಭಾರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಂಬಂಧ ಅಷ್ಟಮಂಗಲ ಪ್ರಶ್ನಾ ವಿಧಿಯಲ್ಲಿ ಕಂಡು ಬಂದಿರುವ ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ದೊರೆತಿದೆ.

ಉಡುಪಿ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ ಹಾಗೂ ವಿಠಲ ತಂತ್ರಿ ಮಾರ್ಗದರ್ಶನದಲ್ಲಿ ವಿದ್ವಾನ್ ಕುಮಾರ ಗುರು ತಂತ್ರಿ ನೇತೃತ್ವ ಹಾಗೂ ಸರದಿ ಅರ್ಚಕ ಸುಧಾಕರ ಅಡಿಗ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಬುಧವಾರ ಸಾಮೂಹಿಕ ಪ್ರಾರ್ಥನೆ, ಗಣಯಾಗ, ಮಹಾಮೃತ್ಯುಂಜಯ ಯಾಗ, ಸರ್ಪಸಂಸ್ಕಾರ ಮಂಗಲ, ಮಹಾ ಸುದರ್ಶನ ಯಾಗ ನಡೆಯಿತು. ಗುರುವಾರ ಬೃಹಸ್ಪತಿ ಸಹಸ್ರನಾಮ ಯಾಗ, ದ್ವಾದಶ ಮೂರ್ತಿ ಆರಾಧನೆ, ರಾತ್ರಿ ಮಹಾ ಅಘೋರ ಯಾಗ, ಮಂತ್ರ ಯಾಗಾದಿಗಳು ನಡೆದವು.

ಗಣ್ಯರಾದ ಶಾಂತರಾಮ ಸೂಡ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಸಮಿತಿ ದಸ್ಯರಾದ ರಾಜಕುಮಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿ ಮನೆ, ಸಂತೆಕಟ್ಟೆ ರಾಮದಾಸ್ ನಾಯ್ಕ ಬುಕ್ಕಿಗುಡ್ಡೆ, ಲಲಿತಾಂಬ ಆನಂದ ಗೌಡ ಕುಕ್ಕುಂಜಾರು ಜೋಗಿ ಬೆಟ್ಟು, ರಾಮ ಕುಲಾಲ್ ಪಕ್ಕಾಲ್, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್.ಶೆಟ್ಟಿ ವಡ್ಡಮೇಶ್ವರ, ವ್ಯವಸ್ಥಾಪನ ಸಮಿತಿಯ ತಾಂತ್ರಿಕ ಸಲಹೆಗಾರ ಸಂತೋಷ್ ಕುಲಾಲ್ ಪಕ್ಕಾಲು, ಕಾನೂನು ಸಲಹೆಗಾರ ವಿಶ್ವಾಸ ಶೆಟ್ಟಿ, ಕಚೇರಿ ಪ್ರಬಂಧಕ ಚನ್ನಕೇಶವ ಭಟ್, ನಿತ್ಯ ಸ್ವಾಗತ ಸಮಿತಿ ಅಧ್ಯಕ್ಷ ಸಂದೀಪ ಶೆಟ್ಟಿ, ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net