ತಾಳಮದ್ದಳೆ ಕಲಾವಿದರಿಗೆ ಗೌರವಾರ್ಪಣೆ

blm (3)
Published on

ಕಾರ್ಕಳ: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ಹೆಬ್ರಿ ಚಾರದ ಮಹಿಷಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ತಂಡದಿಂದ ತಾಳಮದ್ದಳೆ ಕೂಟ ನಡೆದು ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಎಸ್.ಶೆಟ್ಟಿ ಗೌರವಿಸಿದರು. ಅರ್ಚಕ ಮದ್ವಪತಿ ಆಚಾರ್ಯ, ಸಮಿತಿ ಸದಸ್ಯರಾದ ಶೇಖರ ಶೆಟ್ಟಿ, ಕೃಷ್ಣ ಪೂಜಾರಿ ಭಂಟ್ರೊಟ್ಟು, ಸುಜಾತಾ ಸುಬೋಧ ಶೆಟ್ಟಿ, ಪ್ರಾಯೋಜಕರಾದ ಸದಾಶಿವ ಪ್ರಭು, ನಮ್ಮ ಫ್ರೆಂಡ್ಸ್‌ನ ಶರತ್ ಶೆಟ್ಟಿ, ಉದಯ ಪೂಜಾರಿ ಮತ್ತಿತರರಿದ್ದರು. ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net