ಸಾಲಗಾರರ ಕಾಟಕ್ಕೆ ರೈತ ಆತ್ಮಹತ್ಯೆ

Web 2
Published on

ಚಿಂತಾಮಣಿ: ತಾಲೂಕಿನ ಕಾಚಹಳ್ಳಿಯಲ್ಲಿ ರೈತ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ರಾಮಣ್ಣ(32) ಮೃತ. ಸಂಬಂಧಿಕರ ಜಮೀನಿನಲ್ಲಿ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದ ರಾಮಣ್ಣ, ಕಳೆದ ಎರಡ್ಮೂರು ವರ್ಷಗಳಿಂದ ಸಲು ಸಮರ್ಪಕ ವಾಗಿ ಕೈಸೇರದ ಕಾರಣ ಫೈನಾನ್ಸ್ ಮತ್ತು ಖಾಸಗಿ ವ್ಯಕ್ತಿಗಳ ಬಳಿ ಮೀಟರ್ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಇತ್ತೀಚೆಗೆ ಸಾಲಕೊಟ್ಟವರುಮನೆಯ ಬಳಿ, ಕೆಲಸದ ಸ್ಥಳದಲ್ಲಿ ಬಂದು ಕಿರುಕುಳ ನೀಡಿದ್ದರು. ಅಲ್ಲದೇ ಪ್ರಾಣ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ರಾಮಣ್ಣ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಮಣ್ಣ ಪತ್ನಿ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಚೆಕ್ ತೆಗೆದುಕೊಂಡು ಮೀಟರ್ ಬಡ್ಡಿಗೆ ಹಣ ನೀಡಿದವರು

ಹೆಸರನ್ನೂ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net