

ಮೈಸೂರು: ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜೋಡೆತ್ತಿನ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ಕೆಲವು ಊಹಾಪೋಹಗಳು ಚರ್ಚೆಯಲ್ಲಿವೆ. ನಾನು ಸಿಎಂ ರೇಸಿನಲ್ಲಿಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ. ನನಗೆ ಒಳ್ಳೆಯ ಜವಾಬ್ದಾರಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಡಾ ವಿಚಾರದಲ್ಲಿ ಸಿಎಂ ಪತ್ನಿ ತಪ್ಪು ಮಾಡಿಲ್ಲ. ಎಲ್ಲ ಪಕ್ಷಗಳಲ್ಲೂ ಮುಡಾ ಫಲಾನುಭವಿಗಳು ಇದ್ದಾರೆ. ಅವರ ಹೆಸರು ಮುನ್ನೆಲೆಗೆ ಬಂದಿಲ್ಲ. ವಿರೋಧ ಪಕ್ಷದವರು ಕಿತಾಪತಿ ಮಾಡಿಕೊಂಡು ನಿಂತಿದ್ದಾರೆ. ಕಾನೂನುಬಾಹಿರವಾಗಿ ಸೈಟು ಪಡೆದವರು ಸ್ವಯಂಪ್ರೇರಿತವಾಗಿ ಸೈಟು ಹಿಂದಿರುಗಿಸಲಿ. 50:50 ಅನುಪಾತದಲ್ಲಿ ಸಯಟ್ ಹಂಚಿಕೆ ಲೀಗಲ್ ಅಲ್ಲ. ಅನುಪಾತ ಜಾಸ್ತಿ ಇದೆ. ಈ ಬಗ್ಗೆ ನನಗೆ ಡೌಟ್ ಇದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇ.ಡಿ., ಸಿಬಿಐ ಮೇಲೆ ನನಗೆ ಭಯ ಇಲ್ಲ. ನನ್ನ ಜತೆ ಇರುವುದು ಪಂಚೆ, ಶರ್ಟ್ ಮಾತ್ರ ಎಂದು ಹೇಳಿದರು.
ದೇವೇಗೌಡರು ಮಗನಿಗೆ ಬುದ್ಧಿ ಹೇಳಲಿ: ಮೈಸೂರು: ಇಡೀ ದೇಶಕ್ಕೆ ಬುದ್ಧಿ ಹೇಳುವ ಎಚ್.ಡಿ.ದೇವೇಗೌಡರು ತಮ್ಮ ಮಗನಿಗೆ ಏಕೆ ಬುದ್ಧಿ ಹೇಳುತ್ತಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕುಟುಕಿದರು.
ಎಚ್.ಡಿ.ಕುವಾರಸ್ವಾಮಿ ತಮ್ಮ ಜವಾಬ್ದಾರಿ ಮರೆತು ಮೂರು ದಿನಕ್ಕೆ ಇಲ್ಲಿ ಬಂದು ವಾತನಾಡುತ್ತಿದ್ದಾರೆ. ಈ ಬಗ್ಗೆ ದೇವೇಗೌಡರು ಕುವಾರಸ್ವಾಮಿಗೆ ಬುದ್ಧಿ ಹೇಳದೆ ಇರುವುದು ಸೋಜಿಗವಾಗಿದೆ. ನಾನು ಕಷಿ ಮಂತ್ರಿಯಾಗಿ ಕಷಿ ಅಭಿವದ್ಧಿ ವಾಡುತ್ತಿದ್ದೇನೆ. ಕುಮಾರಸ್ವಾಮಿ ಕೈಗಾರಿಕಾ ಮಂತ್ರಿಯಾಗಿ ಕೈಗಾರಿಕಾ ಅಭಿವೃದ್ಧಿ ವಾಡಲಿ. ಅಧಿಕಾರಿ ಬಗ್ಗೆ ನಾಯಿ, ನರಿ ಪದ ಬಳಕೆ ವಾಡಿದ್ದಾರೆ. ಅವರ ಪ್ರಕಾರ ಅವರೊಬ್ಬರೆ ಸಭ್ಯಸ್ಥರು ಎಂದುಕೊಂಡಿದ್ದಾರೆ. ಇದನ್ನೆಲ್ಲಾ ಕುವಾರಸ್ವಾಮಿ ಬಿಡಬೇಕು ಎಂದು ಹೇಳಿದರು.