

ಬೆಂಗಳೂರು: ಕರೊನಾ ಲಾಕ್ಡೌನ್ಗಳೆಲ್ಲ ಕಳೆದು ಸದ್ಯ ಅನ್ಲಾಕ್-4 ಪ್ರಕ್ರಿಯೆ ಜಾರಿಯಲ್ಲಿದೆ. ಈ ಹಂತದಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ, ಉಳಿದ ವಲಯಗಳಲ್ಲಿ ಸಾರ್ವಜನಿಕ ಉದ್ಯಾನವನಗಳು, ಉದ್ಯಾನವನದೊಳಗಿನ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಕಲ್ಪಿಸಿ, ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ಕರೊನಾ ಹೆಚ್ಚಾಗಿದ್ದು ಕಂಟೇನ್ಮೆಂಟ್ ಝೋನ್ಗಳೆಂದು ಗುರುತಿಸಲ್ಪಟ್ಟ ಸ್ಥಳಗಳಲ್ಲಿರುವ ಉದ್ಯಾನವನಗಳು ಹಾಗೇ ಬಂದ್ ಇರುತ್ತವೆ. ಉಳಿದೆಲ್ಲ ಕಡೆ ಲಾಕ್ಡೌನ್ಗೂ ಪೂರ್ವದಲ್ಲಿದ್ದಂತೆ ಉದ್ಯಾನವನಗಳಿಗೆ ಸಾರ್ವಜನಿಕರು ಇನ್ನು ಭೇಟಿ ಕೊಡಬಹುದಾಗಿದೆ. ಆದರೆ ಕೊವಿಡ್-19 ನಿಯಂತ್ರಣಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಕರೊನಾ ಅನ್ಲಾಕ್-4 ಮಾರ್ಗಸೂಚಿಗಳು ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿದ್ದು, ನಿಯಮಗಳ ಪಾಲನೆ ಕಡ್ಡಾಯವಾಗಿದೆ.