

ವಿಜಯವಾಣಿ ಸುದ್ದಿಜಾಲ ನಾಯಕನಹಟ್ಟಿ (ಚಿತ್ರದುರ್ಗ)
ಅಣಬೆ ಆಸೆಗೆ ಅಕ್ರಮವಾಗಿ ಡಿಆರ್ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಆವರಣ ಪ್ರವೇಶಿಸಿದ್ದ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ನಾಯಕನಹಟ್ಟಿಯ ಶಶಾಂಕ್, ತಿಪ್ಪೇಸ್ವಾಮಿ, ಪ್ರಕಾಶ್ ಹಾಗೂ ಆರ್.ತಿಪ್ಪೇಸ್ವಾಮಿ ಬಂಧಿತ ಯುವಕರು. ಇವರು ಡಿಆರ್ಡಿಒನ 12 ಅಡಿ ಕಲ್ಲಿನ ಕಾಂಪೌಂಡ್ ದಾಟಿ ಸಂಸ್ಥೆಯ ನಿಷೇಧಿತ ಪ್ರದೇಶ ಪ್ರವೇಶಿಸಿದ್ದರು.
ಇದನ್ನೂ ಓದಿ: ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ
ನಿಷೇಧಿತ ಪ್ರದೇಶದ ಅರಿವಿರದೆ ಅಣಬೆ ಕೀಳಲು ಕಾಂಪೌಂಡ್ ದಾಟಿದ್ದಾಗಿ ಈ ಯವಕರು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆನ್ನಲಾಗಿದೆ.
3,600 ಎಕರೆ ವಿಸ್ತೀರ್ಣದ ಈ ಸಂಸ್ಥೆಯ ಸುತ್ತ ಪೂರ್ಣ ಪ್ರಮಾಣದ ಭದ್ರತೆ ಇದೆ. ಪ್ರತಿ ಅರ್ಧ ಕಿ.ಮೀ.ಗೆ ಒಂದರಂತೆ ವಾಚ್ ಟವರ್, ಸಿಸಿ ಕ್ಯಾಮಾರಗಳಿವೆ. ದಿನದ 24 ತಾಸು ಯೋಧರ ಕಣ್ಗಾವಲೂ ಇಲ್ಲಿದೆ.
ಇದಾವುದರ ಅರಿವಿರದ ಕಾಪೌಂಡ್ ಪ್ರವೇಶಿಸಿದ್ದ ಈ ಯುವಕರನ್ನು ಕಾವಲು ಕಾಯುತ್ತಿದ್ದ ಸೇನಾ ಯೋಧರು ವಶಕ್ಕೆ ತೆಗೆದುಕೊಂಡಿದ್ದಾರೆ. ನಿಷೇಧಿತ ಪ್ರದೇಶಕ್ಕೆ ಅಕ್ರಮ ನುಸುಳುವಿಕೆ ಕಾಯ್ದೆ ಅಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.