ಪಥ ಸಂಚಲನ ನಡೆಸಿದ ಅರೆ ಸೇನಾಪಡೆ

63aec0e5-e6b7-42ba-9ceb-0d762e719d11-1.jpg
Published on

ರಾಮನಗರ: ಉಪ ಚುನಾವಣಾ ಕದನ ಕಣ ರಂಗೇರುತ್ತಿರುವ ನಡುವೆಯೇ ಶಾಂತಿಯುತ ಚುನಾವಣೆ ನಡೆಸಲು ಅನುವಾಗುವಂತೆ ಅರೆ ಸೇನಾಪಡೆ ಒಂದು ತುಕಡಿ ಆಗಮಿಸಿದ್ದು ವಿವಿಧ ಕಡೆಗಳಲ್ಲಿ ಪಥ ಸಂಚಲನ ನಡೆಸಿತು.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗನೂರು, ತಗಚಗೆರೆ, ಹಾಗೂ ಮೊಳೆದೊಡ್ಡಿ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಹಾಗೂ ಅರೆಸೇನಾ ಪಡೆಗಳೊಂದಿಗೆ ಪಥಸಂಚಲನ ನಡೆಸಲಾಯಿತು.
ನಂತರ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಂಬಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಅರೆಸೇನಾ ಪಡೆಗಳೊಂದಿಗೆ ಪಥಸಂಚಲನ ನಡೆಸಲಾಯಿತು.

ಈ ವೇಳೆ ಎಎಸ್ಪಿ ಸುರೇಶ್, ಡಿವೈಎಸ್ಪಿ ಕೆಪಿ ಗಿರಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net