

ಎಂದಿನಂತೆ ಕೇಂದ್ರದ ವಾರ್ಷಿಕ ಬಜೆಟ್‌ನಲ್ಲಿ ಈ ಬಾರಿಯೂ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು ದೊರೆತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಆಯವ್ಯಯದಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.81 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ.
ಕಳೆದ 2024-25 ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ 6,21,940 ಕೋಟಿ ನೀಡಿದ್ದ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 6,81,210 ಕೋಟಿ ಮೀಸಲಿಡುವ ಮೂಲಕ ಕಳೆದ ವರ್ಷಕ್ಕಿಂತ ಹೆಚ್ಚಿನ ಅನುದಾನವನ್ನು ಕಲ್ಪಿಸಿದೆ.
ಒಟ್ಟು ಬಜೆಟ್‌ನಲ್ಲಿ 1,92,387 ಕೋಟಿ ಬಂಡವಾಳ ವೆಚ್ಚಕ್ಕೆ, 4,88,822 ಕೋಟಿ ಕ್ಯಾಪಿಟಲ್ ವೆಚ್ಚಕ್ಕೆ , 1,60,975 ಕೋಟಿ ಪಿಂಚಣಿ ಸೌಲಭ್ಯಕ್ಕೆ ನೀಡಲಾಗಿದೆ.
ವಿಮಾನ ಮತ್ತು ಏರೋ ಇಂಜಿನ್‌ಗಳಿಗೆ 48,614 ಕೋಟಿ, ಯಂತ್ರೋಪಕರಣಗಳಿಗೆ 63099 ಕೋಟಿ, ನೌಕಪಡೆಗೆ 24,390 ಕೋಟಿ ರೂಪಾಯಿಗಳನ್ನು ಮೀಸಲಾಗಿಡಲಾಗಿದೆ.