ಕುಡಿದ ಮತ್ತಿನಲ್ಲಿ ನಡೆದೇ ಹೋಯ್ತು ಕೊಲೆ

IMG-20240129-WA0029.jpg
Published on

ರಾಮನಗರ: ಕುಡಿದ ಮತ್ತಿನಲ್ಲಿ ಆರಂಭಗೊಂಡ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ
ತಿಮ್ಮೇಗೌಡನಪಾಳ್ಯ ಗ್ರಾಮದ ಬಳಿ ನಡೆದಿದೆ.


ತಿಮ್ಮೇಗೌಡನಪಾಳ್ಯದ ಅಶೋಕ್ ( 31) ಕೊಲೆಯಾದ ವ್ಯಕ್ತಿ.

ಭಾನುವಾರವಾದ್ದರಿಂದ ತಿಮ್ಮೇಗೌಡನ ಪಾಳ್ಯದ ಮಂಜುನಾಥ್ ಬಾಬು ಎಂಬುವರ ತೋಟದ ಮನೆಗೆ 25 ಕ್ಕೂ ಹೆಚ್ಚು ಸ್ನೇಹಿತರು ಬೆಂಗಳೂರಿನಿಂದ ಬಂದಿದ್ದರು.

ಈ ವೇಳೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಅಶೋಕ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನೆ ನಂತರ ಎಲ್ಲರೂ ಪರಾರಿ ಆಗಿದ್ದಾರೆ.

ಮಂಜುನಾಥ್ ಬಾಬು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸ್ಥಳಕ್ಕೆ ಕುದೂರು ಪೋಲಿಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net