ಬಮುಲ್​ ಚುನಾವಣೆಗೆ ಕೂಡಿಬರದ ಮುಹೂರ್ತ

bamul
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ ಲೋಕಸಭೆ ಚುಣಾವಣೆ ಮುಗಿದರೂ ಬೆಂಗಳೂರು ಹಾಲು ಒಕ್ಕೂಟ ಬಮುಲ್​ ಚುನಾವಣೆ ನಡೆಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿಲ್ಲ. ಲೋಕಸಭೆ ಚುನಾವಣೆಗೂ ಮುನ್ನವೇ ಬಮುಲ್​ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದವು. ಆದರೆ, ಲೋಕಸಭೆ ಚುನಾವಣೆ ನೆಪವೊಡ್ಡಿ ಬಹುತೇಕ ಎಲ್ಲ ಸಹಕಾರ ಸಂಗಳ ಚುನಾವಣೆ ಮುಂದೂಡಲಾಗಿತ್ತು. 2024ರ ಮಾರ್ಚ್​ - ಏಪ್ರಿಲ್​ನಲ್ಲಿಯೇ ಚುನಾವಣೆ ನಡೆಯಬೇಕಿತ್ತಾದರೂ, ಈಗ ನಾಲ್ಕು ತಿಂಗಳು ಕಳೆದರೂ ಅದರ ಸುಳಿವೇ ಇಲ್ಲ ಎನ್ನುವಂತೆ ಆಗಿದೆ.

ಕೋರ್ಟ್​ ನಿರ್ದೇಶನಕ್ಕೂ ಬೆಲೆ ಇಲ್ಲ

ಲೋಕಸಭೆ ಚುನಾವಣೆ ಕಾರಣ ಮುಂದೂಡಲ್ಪಟ್ಟಿದ್ದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯನ್ನು ಒಳಗೊಂಡ ಬಮುಲ್​ ಚುನಾವಣೆಯನ್ನು ಫಲಿತಾಂಶ ಪ್ರಕಟಗೊಂಡ ನಂತರವೂ ನಡೆಸದೆ ಇದ್ದ ಕಾರಣ, ಸುಮಾರು ಒಂದು ತಿಂಗಳ ಹಿಂದೆಯೇ ಚನ್ನಪಟ್ಟಣ ಬಮುಲ್​ ನಿರ್ದೇಶಕ ಎಚ್​.ಸಿ. ಜಯಮುತ್ತು ಕೋರ್ಟ್​ ಮೆಟ್ಟಿಲೇರಿ, ಚುನಾವಣೆ ನಡೆಸುವಂತೆ ಕೋರಿದ್ದರು. ನಂತರ ಹೈಕೋರ್ಟ್​ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ, ಕೋರ್ಟ್​ ಆದೇಶಕ್ಕೂ ಮನ್ನಣೆ ನೀಡದ ಸರ್ಕಾರ ಚುನಾವಣೆ ನಡೆಸುವ ಕಾರ್ಯಕ್ಕೆ ಕೈ ಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕ್ಷೇತ್ರಗಳು ಯಾವುವು?

ಬಮುಲ್​ ವ್ಯಾಪ್ತಿಯಲ್ಲಿ ಒಟ್ಟು 13 ನಿರ್ದೇಶಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದರಲ್ಲಿ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುದೂರು, ಬೆಂಗಳೂರು ದಣ, ಉತ್ತರ, ಪೂರ್ವ, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್​, ನೆಲಮಂಗಲ ಕ್ಷೇತ್ರಗಳನ್ನು ಹೊಂದಿವೆ. ಈ ಕ್ಷೇತ್ರ ವ್ಯಾಪ್ತಿಯ ಎಂಪಿಸಿಎಸ್​ಗಳ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಯಾರ್ಯಾರು ಆಕಾಂಕ್ಷಿಗಳು?

ಜಿಲ್ಲೆಯ ಮಟ್ಟಿಗೆ ಬಮುಲ್​ನಿಂದ ಕಣಕ್ಕೆ ಇಳಿಯಲು ಹಲವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇವರಲ್ಲಿ ರಾಮನಗರ ನಿರ್ದೇಶಕ ಸ್ಥಾನಕ್ಕೆ ಹಾಲಿ ನಿರ್ದೇಶಕ ಪಿ.ನಾಗರಾಜು ಕಾಂಗ್ರೆಸ್​ ಬೆಂಬಲಿತರಾಗಿ ಕಣಕ್ಕೆ ಇಳಿಯಲಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಕಲ್ಲುಗೋಪಳ್ಳಿಯ ಕೆಂಪಣ್ಣ ಅವರ ಪತ್ನಿ ರೇಣುಕಮ್ಮ ಜೆಡಿಎಸ್​ ಅಭ್ಯರ್ಥಿ ಆಗುವುದು ಬಹುತೇಕ ನಿಶ್ಚಿತ. ಇನ್ನು ಚನ್ನಪಟ್ಟಣದಲ್ಲಿ ಹಾಲಿ ನಿರ್ದೇಶಕ ಜೆಡಿಎಸ್​ನ ಎಚ್​.ಸಿ. ಜಯಮುತ್ತು ಮತ್ತೊಮ್ಮೆ ಸ್ಪರ್ಧಿಸುವುದು ಪಕ್ಕಾ ಆಗಿದೆ. ಆದರೆ ಬಮುಲ್​ ಮಾಜಿ ನಿರ್ದೇಶಕ ಎಸ್​. ಲಿಂಗೇಶ್​ಕುಮಾರ್​ ಸ್ಪರ್ಧೆಯೊಡ್ಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಮಾಗಡಿಯಲ್ಲಿ ಎರಡು ಕ್ಷೇತ್ರಗಳಿವೆ. ಬಮುಲ್​ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಇದರೊಂದಿಗೆ ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್​.ಎನ್​. ಅಶೋಕ್​ ಸ್ಫರ್ಧೆ ಖಚಿತವಾಗಿದೆ. ಇವರಿಗೆ ಜೆಡಿಎಸ್​ನ ಬೋರ್​ವೆಲ್​ ನರಸಿಂಹಯ್ಯ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ.

ಕುದೂರು ೇತ್ರಕ್ಕೆ ಕಾಂಗ್ರೆಸ್​ನಿಂದ ಕೆಇಬಿ ರಾಜಣ್ಣ ಮತ್ತೆ ಕಣಕ್ಕೆ ಇಳಿಯಲಿದ್ದು, ಇವರ ಪ್ರತಿ ಸ್ಪರ್ಧಿ ಕನ್ನಸಂದ್ರ ಮಂಜುನಾಥ್​ ಆಗುವರೋ ಇಲ್ಲವೇ ಬೇರೆ ಯಾರಿಗೆ ಟಿಕೆಟ್​ ಲಭಿಸಲಿದೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ.

ಕನಕಪುರದಲ್ಲಿ ರಾಜ್​ ಕುಮಾರ್​ ಮತ್ತು ಬೆಂಗಳೂರು ದಕ್ಷಿಣದಲ್ಲಿ ಹರೀಶ್​ ಕುಮಾರ್​ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ, ಅಂತಿಮ ಕ್ಷಣದಲ್ಲಿ ಡಿ.ಕೆ.ಶಿವಕುಮಾರ್​ ಅವರ ಆಣತಿಯಂತೆ ಅಭ್ಯರ್ಥಿಗಳು ಬದಲಾದರೆ ಅಚ್ಚರಿ ಪಡಬೇಕಿಲ್ಲ.

ಅರ್ಹ ಸದಸ್ಯರು

ಜಿಲ್ಲೆಯಲ್ಲಿ ಒಟ್ಟು 966 ಎಂಪಿಸಿಎಸ್​ಗಳು ಇದ್ದು, ಇವುಗಳಲ್ಲಿ 888 ಸಂಗಳು ಮತಚಲಾವಣೆ ಮಾಡುವ ಅರ್ಹತೆ ಹೊಂದಿವೆ. ಈಗಾಗಲೇ ಈ ಸಂಬಂಧ ಬಮುಲ್​ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ. ಆಯಾ ಎಂಪಿಸಿಎಸ್​ನ ಅಧ್ಯಕ್ಷರು ಸಂದ ಪರವಾಗಿ ಮತ ಹಾಕುವ ಹಕ್ಕನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ಗೆಲುವಿಗೆ ಬೇಕಾದ ಡೇರಿಗಳಲ್ಲಿ ತಮ್ಮ ಬೆಂಬಲಿತರಿಗೆ ಅಧಿಕಾರ ಕೊಡಿಸುವ ಕೆಲಸವನ್ನು ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಮಾಡಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಕಾರಣ ನೀಡಿ ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ನಡೆಸುವಂತೆ ಹೈಕೋರ್ಟ್​ ಸೂಚನೆ ನೀಡಿದರೂ ಇನ್ನೂ ನಡೆಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಸರ್ಕಾರ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು.

ಎಚ್​.ಸಿ.ಜಯಮುತ್ತು, ಬಮುಲ್​ ನಿರ್ದೇಶಕ, ಚನ್ನಪಟ್ಟಣ

===

ಕ್ಷೇತ್ರ ಸದಸ್ಯರಸಂಖ್ಯೆ ಅರ್ಹ ಸದಸ್ಯರು

ಮಾಗಡಿ 148 138

ರಾಮನಗರ 168 148

ಹಾರೋಹಳ್ಳಿ 139 135

ಕನಕಪುರ 178 163

ಕುದೂರು 155 150

ಚನ್ನಪಟ್ಟಣ 178 154

&&&&&&&&&&&&&&&&&&&&&&&&&&&&&&&&&&&&&&&&

ಒಟ್ಟು 966 888

&&&&&&&&&&&&&&&&&&&&&&&&&&&&&&&&&&&

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net