

* ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿಗೆ ದೂರು
* ಹೊಂಗಾಣಿದೊಡ್ಡಿ ಗ್ರಾಮಸ್ಥರಿಂದ ಆರೋಪ
ಕನಕಪುರ
ಜನರ ಕಣ್ಣೀರೊರೆಸಬೇಕಾದ ಶಾಸಕರೊಬ್ಬರು ಇಡೀ ಗ್ರಾಮದ ಸ್ವತ್ತನ್ನೇ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಗ್ರಾಮಸ್ಥರೇ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಮುಂದೆ ಈ ಬಗ್ಗೆ ಅಳಲು ತೋಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲಾ ಲೋಕಾಯುಕ್ತದಿಂದ ಬು‘ವಾರ ನಗರ ತಾಲೂಕು ಕಚೇರಿ ಸ‘ಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಹೊಂಗಾಣಿದೊಡ್ಡಿ ಗ್ರಾಮದ ಹಲವರು ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಸ್ನೇಹಾ ಮುಂದೆ ಈ ಬಗ್ಗೆ ಅಲವತ್ತುಕೊಂಡಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಅವರು ಸಾತನೂರು ಹೋಬಳಿಯ ಹೊಂಗಾಣಿದೊಡ್ಡಿ ಗ್ರಾಮವನ್ನೇ ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ. ಮೂರು ತಲೆಮಾರಿನಿಂದ ಗ್ರಾಮದಲ್ಲಿರುವ ನಮಗೆ ಕೃಷಿ ಚಟುವಟಿಕೆ ‘ಭೂಮಿಯೂ ಇಲ್ಲ, ವಸತಿಯೂ ಇಲ್ಲ ಎನ್ನುವಂತಾಗಿದೆ. ನಮಗೆ ನ್ಯಾಯ ಕೊಡಿಸಿ ಸ್ವಾಮಿ ಎಂದು ಮನವಿ ಮಾಡಿದರು.
ಅಂತೆಯೇ, ಈ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣವನ್ನು ‘ಭೂ ನ್ಯಾಯ ಮಂಡಳಿಯಲ್ಲಿ ಇತ್ಯರ್ಥ ಮಾಡಿಕೊಳ್ಳಲು ಸೂಚನೆ ನೀಡಿದೆ. ಆದರೂ, ಇದನ್ನೆಲ್ಲ ಉಲ್ಲಂಘಿಸಿ ಶಾಸಕರ ಹೆಸರಿಗೆ ನೋಂದಣಿ ಮಾಡಿಸಿಕೊಂಡು ನಮ್ಮನ್ನು ಬೀದಿ ಪಾಲು ಮಾಡಿದ್ದಾರೆಂದು ಗ್ರಾಮದ ಮಲ್ಲೇಶ ಮತ್ತು ಇತರರು ನೋವು ತೋಡಿಕೊಂಡರು.