ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿಲ್ಲ

Published on

ಬಿಡದಿ : ಭದ್ರಾಪುರ ಗ್ರಾಮದ ರೈಲು ಹಳಿಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಎಸ್​ಪಿ ಶ್ರೀನಿವಾಸ್​ ಗೌಡ ಸ್ಪಷ್ಟಪಡಿಸಿದರು.

ಬಿಡದಿ ಪೊಲೀಸ್​ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಲಕಿಯ ಶವ ಪತ್ತೆಯಾಗುತ್ತಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎ್​ಎಸ್​ಎಲ್​ಗೆ ಕೆಲವು ಮಾದರಿ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಅತ್ಯಾಚಾರ ನಡೆದಿಲ್ಲ ಎಂದು ದೃಢವಾಗಿದೆ ಎಂದರು.

ಈ ವಿಚಾರವಾಗಿ ಟನೆ ನಡೆದ ದಿನದಿಂದ 10 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯಾರನ್ನೂ ಬಂಧಿಸಿಲ್ಲ. ಈ ಟನೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ಹರಡುವ ರೀತಿಯಲ್ಲಿ ವಿಡಿಯೋ ಹರಿಬಿಡಲಾಗಿತ್ತು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ : ಬಾಲಕಿಗೆ ರೈಲು ಹೊಡೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾನುವಾರ ಸಂಜೆ 6.9 ಗಂಟೆಗೆ ರೈಲು ಡಿಕ್ಕಿ ಹೊಡೆದಿದೆ. ಬೆಂಗಳೂರು& ಕಡಲೂರು ( 16232/39294) ರೈಲು ಡಿಕ್ಕಿ ಹೊಡೆದಿದೆ. ವೈಫೈ ಆಧಾರಿತ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಇದರ ಒರಿಜನಲ್​ ಡಿವೈಸ್​ ಸಿಕಂದರಾಬಾದ್​ನಲ್ಲಿದ್ದು, ಅಲ್ಲಿಂದ ಮೂಲ ವಿಡಿಯೋ ತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್​ಪಿ ಹೇಳಿದರು.

ರೈಲ್ವೆ ಪ್ರಕರಣ ಪೊಲೀಸರಿಂದ ತನಿಖೆ : ರೈಲು ಹಳಿ ಪಕ್ಕದಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣ ರೈಲ್ವೆ ಪೊಲೀಸರಿಗೆ ಬರುತ್ತದೆ. ನಾವು ಟನಾ ಸ್ಥಳಕ್ಕೆ ಹೋಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಕೊಲೆ ಎಂದು ಬಿಂಬಿಸಲಾಗಿತ್ತು. ಹಾಗಾಗಿ ಈ ಪ್ರಕರಣವನ್ನು ನಾವು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದರು.

ಗಾಯದ ಗುರುತು ಪತ್ತೆ : ಬಾಲಕಿ ಶವ ಸಿಕ್ಕ ಪರಿಸ್ಥಿತಿಯಲ್ಲಿ ತಲೆ, ದೇಹದ ಹಿಂಬಿದಿ ಭಾಗ ಸೇರಿ ಕೆಲವು ಕಡೆ ಗಾಯಗಾಳಾಗಿದ್ದವು. ಈ ನಿಟ್ಟಿನಲ್ಲಿ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಗಿದೆ. ವೈದ್ಯರು ಇನ್ನೂ ವರದಿ ನೀಡಿಲ್ಲ ಎ್​ಎಸ್​ಎಲ್​ ವರದಿ ಜತೆಗೆ ನಮ್ಮಿಂದ ಕೆಲವು ದಾಖಲೆ ಕೇಳಿದ್ದರು ಕೊಡಲಾಗಿದೆ. ಸೋಮವಾರ ವರದಿ ಬರಲಿದೆ ಎಂದು ಎಸ್​ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net