ಪಟಾಕಿ ದುರಂತ ಗಾಯಾಳುಗಳ ಭೇಟಿಯಾದ ಸಚಿವ

Ksd_firework
Published on

ಕಾಸರಗೋಡು: ನೀಲೇಶ್ವರ ವೀರಾರ್‌ಕಾವ್ ಕಳಿಯಾಟ ಮಹೋತ್ಸವ ಸಂದರ್ಭ ಸಂಭವಿಸಿದ ಪಟಾಕಿ ದುರಂತದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿರುವವರನ್ನು ಪ್ರಾಚ್ಯವಸ್ತು ಮತ್ತು ನೋಂದಣಿ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಗಾಯಗೊಂಡವರ ಕುಟುಂಬಗಳಿಗೆ ಸಚಿವರು ಸಾಂತ್ವನ ಹೇಳಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಪರಿಯಾರಂ ವೈದ್ಯಕೀಯ ಕಾಲೇಜು ಮತ್ತು ಮಿಮ್ಸ್ ಆಸ್ಪತ್ರೆಯಂತಹ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿದರು.

ದುರಂತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲು ಸಂಪುಟ ಸಭೆ ತೀರ್ಮಾನಿಸಿರುವುದಾಗಿ ಸಚಿವರು ತಿಳಿಸಿದರು.

ಕೈಪ್ರತ್ ಕೃಷ್ಣನ್ ನಂಬಿಯಾರ್, ಕೆಪಿ ಜಯರಾಜನ್, ಪ್ರಮೋದ್ ಕರುವಾಲಂ ಕೂಲೇರಿ ರಾಘವನ್, ಜನಾರ್ದನನ್, ಪುರುಷೋತ್ತಮನ್, ವಾರ್ಡ್ ಕೌನ್ಸಿಲರ್ ಇ.ಶಜೀರ್ ಮೊದಲಾದವರು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net