

ಕೋಟ: ಭವಿಷ್ಯದ ಕುಡಿಗಳಲ್ಲಿ ಅಧ್ಯಯನ ಬಹಳಷ್ಟಿದೆ. ರಂಗಭೂಮಿ ಚಟುವಟಿಕೆಗಳಿಂದ ಮಕ್ಕಳ ಮನಸು ಅರಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧಮನಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾನೀಯ ಎಂದು ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಸಾಲಿಗ್ರಾಮದ ಅಧ್ಯಕ್ಷ ಬಿ.ಎಂ.ಗುರುರಾಜ್ ರಾವ್ ಅಭಿಪ್ರಾಯಪಟ್ಟರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಧಮನಿ ಟ್ರಸ್ಟ್ ಆಯೋಜಿಸಿದ ಎರಡು ದಿನಗಳ ನಾಟಕೋತ್ಸವದಲ್ಲಿ ಮಾತನಾಡಿದರು.
ರಂಗ ನಿರ್ದೇಶಕ ರೋಹಿತ್ ಎಸ್.ಬೈಕಾಡಿ ಅವರನ್ನು ಅಭಿನಂದಿಸಲಾಯಿತು. ಕೋಟ ಶಿವರಾಮ ಕಾರಂತ ಟ್ರಸ್ಟ್ ಕಾರ್ಯದರ್ಶಿ ಕೆ.ನಾರಾಯಣ, ಕೈಲಾಸ ಕಲಾಕ್ಷೇತ್ರ ಅಧ್ಯಕ್ಷ ಹೆರಿಯ ವಾಸ್ಟರ್, ಶ್ರೀಶ ತೆಕ್ಕಟ್ಟೆ, ಸುಲೋಚನಾ ಉಪಸ್ಥಿತರಿದ್ದರು.
ಪಂಚಮಿ ಕಾರ್ಯಕ್ರಮ ನಿರ್ವಹಣೆ ವಾಡಿದರು. ರೋಹಿತ್ ಎಸ್.ಬೈಕಾಡಿ ನಿರ್ದೇಶನದಲ್ಲಿ ಕಾರಂತಜ್ಜರ ಮಕ್ಕಳ ನಾಟಕ ‘ಸೂರ್ಯ ಚಂದ್ರ’ ಹಾಗೂ ಶ್ರೀಶ ಭಟ್ ನಿರ್ದೇಶನದಲ್ಲಿ ‘ಸ್ಟೋನ್ ಸೂಪ್’ ನಾಟಕ ರಂಗ ಪ್ರಸ್ತುತಿಗೊಂಡಿತು.