

ಕಾಸರಗೋಡು: ವಾಹನಗಳನ್ನು ಬಾಡಿಗೆಗೆ ಪಡೆದು, ರಾಜ್ಯದಿಂದ ಹೊರಕ್ಕೆ ಸಾಗಿಸಿ ವಾರಾಟ ವಾಡುವ ಜಾಲದ ಪ್ರಮುಖ ವ್ಯಕ್ತಿ, ಕಾಸರಗೋಡು ಉಳಿಯತ್ತಡ್ಕ ಎಸ್.ಪಿ.ನಗರ ನಿವಾಸಿ ಅಬ್ದುಲ್ ಅಶ್ಪಾಕ್ ಎಂಬಾತನನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಈತ ಬಾಡಿಗೆಗೆ ಪಡೆದ ವಾಹನಗಳನ್ನು ಹೊರರಾಜ್ಯಗಳಿಗೆ ಸಾಗಿಸಿ ಅಲ್ಲಿ ವಾಹನ ವಾರಾಟ ದಂಧೆ ಏಜೆಂಟ್‌ಗಳಿಗೆ ಹಸ್ತಾಂತರಿಸುತ್ತಿದ್ದನು. ನಂತರ ವಾಹನ ವಾಲೀಕರಿಗೆ ಬೆದರಿಕೆಯನ್ನೂ ಒಡ್ಡುತ್ತಿದ್ದನು. ವಾಹನ ಬಾಡಿಗೆಗೆ ಪಡೆದು, ಇತರ ರಾಜ್ಯಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಹಾಗೂ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನನ್ನು ಸ್ಪೆಷಲ್ ಸಬ್‌ಜೈಲಿನಲ್ಲಿರಿಸಲಾಗಿದೆ.