

ಗಂಗೊಳ್ಳಿ: ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಚರಂಡಿಗೆ ಬಿದ್ದಿದೆ. ಏಕಮುಖ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಲಾರಿ ಎಡಬದಿಗೆ ಚಲಾಯಿಸಿದೆ. ಪರಿಣಾಮ ಲಾರಿ ಚರಂಡಿಗೆ ಬಿದ್ದಿದೆ. ಲಾರಿ ಚಾಲಕ ಮುಕೇಶ ಎಂಬುವರಿಗೆ ಗಾಯಗಳಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.