ಬಾವಿಗೆ ಬಿದ್ದು ಯುವತಿ ಮೃತ್ಯು

Death
Published on

ಕುಂದಾಪುರ: ಕಾಳಾವರ ಗ್ರಾಮದ ಸಳ್ವಾಡಿಯ ಉದಯ ಎಂಬುವರ ಪುತ್ರಿ ಮುಗ್ಧ ಯು. (25) ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಡಿ.25ರಂದು ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಮನೆ ಬಾವಿಯ ಬಳಿಯಿರುವ ಪಂಪ್‌ಸೆಟ್ ಆಫ್ ಮಾಡಲು ಹೋಗಿದ್ದಾಗಲೋ ಅಥವಾ ಯಾವುದೋ ಕಾರಣಕ್ಕೋ ಬಾವಿಯ ಬಳಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳದವರ ಸಹಾಯದಿಂದ ಬಾವಿಯ ನೀರಿನಲ್ಲಿ ಹುಡುಕಾಡಿದಾಗ ಮುಗ್ಧಳ ದೇಹವು ಮೃತಪಟ್ಟಿರುವ ಸ್ಥಿತಿಯಲ್ಲಿ ದೊರೆತಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net