

ಮುಂಡಗೋಡ: ತಾಲೂಕಿನ ದೊಡ್ಡಹಾರವಳ್ಳಿ ಸನಿಹದ ಹಳ್ಳದಲ್ಲಿ ಗುರುವಾರ ಚಿರತೆಯ ಕಳೇಬರ ಪತ್ತೆಯಾಗಿದೆ.
ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ ಆಗಾಗ ಕಂಡುಬರುತ್ತಿದ್ದ ಚಿರತೆ ಇದೆ ಎಂದು ಅಂದಾಜಿಸಲಾಗಿದೆ.
ಎರಡೂವರೆ ವರ್ಷದ ಗಂಡು ಚಿರತೆ ಇದಾಗಿದ್ದು, ಆರೇಳು ದಿನಗಳ ಹಿಂದೆಯೇ ಮೃತಪಟ್ಟಿರಬಹುದು. ನಂತರ ಹಳ್ಳದ ನೀರಿನಲ್ಲಿ ತೇಲಿ ಬಂದಿದೆ. ಚಿರತೆ ಸಂಪೂರ್ಣ ಕೊಳೆತು ಹುಳಗಳು ಬಿದ್ದಿವೆ. ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ, ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯ ಇಲಾಖೆಯವರು ಚಿರತೆಯ ಅಂತ್ಯಕ್ರಿಯೆ ನಡೆಸಿದರು.
ಚಿರತೆಯ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಸಾವನ್ನಪ್ಪಿತೆ? ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿತೆ? ಎಂಬುದು ತಿಳಿಯದಾಗಿದೆ. ಈ ಕುರಿತು ಕಾತೂರ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸಿಎಫ್ ರವಿ ಹುಲಕೋಟಿ, ಕಾತೂರ ಆರ್ಎಫ್ಒ ಮಂಜುನಾಥ ನಾಯ್ಕ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
The leopard that floated in the pit is missing!