

ಯಲಬುರ್ಗಾ: ಧಾರ್ಮಿಕ, ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮವನ್ನು ಸುಸಂಸ್ಕೃತವನ್ನಾಗಿ ಮಾಡಬೇಕು ಎಂದು ಶ್ರೀಧರ ಮುರಡಿ ಹಿರೇಮಠ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಂಡಲಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರವೇ ಸ್ವಾಭಿಮಾನಿ ಸೇನೆ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇಯಾದ ಶ್ರೀಮಂತಿಕೆ ಹೊಂದಿದೆ. ಭಾಷೆ ಉಳಿವಿಗೆ, ಕರ್ನಾಟಕ ಏಕೀಕರಣಕ್ಕೆ ಮಹನೀಯರ ಕೊಡುಗೆ ಅನನ್ಯವಾದದ್ದು. ಭಾಷೆ ಉಳಿಸಿ ಬೆಳಸುವ ಪ್ರಯತ್ನ ನಡೆಯಬೇಕು. ಯುವಕರು ದುಶ್ಟಗಳಿಗೆ ಬಲಿಯಾಗದೇ ಸುಂದರ ಬದುಕು ಕಟ್ಟಿಕೊಳ್ಳಿ ಎಂದರು.
ಮಂಡಲಮರಿ ಕ್ರಾಸ್‌ನಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು. ಶಾಲಾ ವಿದ್ಯಾರ್ಥಿಗಳು, ಗಣ್ಯರು ಪಾಲ್ಗೊಂಡಿದ್ದರು. ಅಂಗನವಾಡಿ ಮಕ್ಕಳಿಗೆ 50 ಜತೆ ಸಮವಸ್ತ್ರ ವಿತರಿಸಿ, ವಿವಿಧ ಕ್ಷೇತ್ರದಲ್ಲಿ ಸಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಕರವೇ ರಾಜ್ಯಾಧ್ಯಕ್ಷ ನಿಂಗರಾಜ ಗೌಡ್ರು, ಮಕ್ಕಳ್ಳಿಯ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ವಕೀಲ ಭರಮಗೌಡ ಪಾಟೀಲ್, ಕನ್ನಡ ಕೋಗಿಲೆ ಅರ್ಜುನ ಇಟಗಿ, ಸಂಘಟನೆಯ ರಾಜ್ಯ ಪ್ರ.ಕಾರ್ಯದರ್ಶಿ ಸುರೇಶಗೌಡ, ಜಿಲ್ಲಾಧ್ಯಕ್ಷ ಸಂತೋಷ ತೋಟದ, ಗಣ್ಯರಾದ ಮಹೇಶಗೌಡ,
ಸುಜ್ಞಾನ ಮೂರ್ತಿ, ಶ್ರೀಧರ ನಾಯ್ಕ, ಶ್ರೀನಿವಾಸ, ಭೀಮನಗೌಡ ಪೊಲೀಸ್ ಪಾಟೀಲ್, ರಾಮಣ್ಣ ದಿವಾಣದ, ದ್ಯಾಮಣ್ಣ ಕಮ್ಮಾರ, ಹನುಮೇಶ ಕೊಂಡಗುರಿ, ಮಳಿಯಪ್ಪ ಬಡಿಗೇರ್, ಪರಶುರಾಮ ಗದ್ದಿ, ಮಂಜಪ್ಪ ಹಾಸಗಲ್, ರಾಮಣ್ಣ, ಬಸವರಾಜ ಮುಂಡರಗಿ, ಜ್ಯೂನಿಯರ್ ಉಪೇಂದ್ರ, ಜ್ಯೂನಿಯರ್ ವಿಷ್ಣುವರ್ಧನ ಇತರರಿದ್ದರು.