ಸಾಲಿಗ್ರಾಮದಲ್ಲಿಂದು ಲಕ್ಷಮೋದಕ ಯಾಗ ಸಂಪನ್ನ

sal
Published on

ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿರುವ ಲಕ್ಷಮೋದಕ ಗಣಪತಿ ಯಾಗದ ಪೂರ್ಣಾಹುತಿ ಮಾ.8ರಂದು ನೆರವೇರಲಿದೆ. 9ರಂದು ಶ್ರೀ ಗುರುಧಾಮ ಯಾತ್ರಿ ನಿವಾಸ ಉದ್ಘಾಟನೆಗೊಳ್ಳಲಿದೆ.

8ರಂದು ಸಂಜೆ 5ರಿಂದ ಶ್ರೀ ಗುರುಧಾಮದಲ್ಲಿ ವಾಸ್ತುಪೂಜೆ, ವಾಸ್ತುಹೋಮ, ಸುದರ್ಶನ ಹೋಮ, ದಿಗ್ಬಲಿ ನೆರವೇರಲಿದೆ. 9ರಂದು ಬೆಳಗ್ಗೆ ಶ್ರೀಗುರುನರಸಿಂಹ ದೇವರ ಸನ್ನಿಧಿಯಲ್ಲಿ ಸಹಸ್ರ ಸಂಖ್ಯಾ ನರಸಿಂಹ ಹೋಮ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಸಂಜೆ 6-00 ರಿಂದ ಶ್ರೀ ಗುರುನರಸಿಂಹ ದೇವರಿಗೆ ಹಿರೇರಂಗಪೂಜೆ, ಉತ್ಸವಬಲಿ ಶ್ರೀ ಆಂಜನೇಯ ದೇವಳದವರೆಗೆ ರಜತರಥೋತ್ಸವವು ಜರುಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net