

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ದೇವರಾಜು ಅರಸು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ದೇವರಾಜು ಅರಸು ಸಂವಿಧಾನದ ಆಶಯದಂತೆ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದ ಮಹಾ ನಾಯಕ, ದೇವರಾಜ ಅರಸು ಅವರು ಬಸವಣ್ಣ ನವರ ಕಾಯಕವೇ ಕೈಲಾಸ ಎಂಬಂತೆ, ಅಂಬೇಡ್ಕರ್ ಅವರ ಸಮಾನತೆಯ ಆಶಯದಂತೆ ಮುಖ್ಯ ಮಂತ್ರಿಯಾಗಿದ್ದಾಗ ಬಡವರ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿರುವುದು ಈಗಲೂ ನಮ್ಮ ಕಣ್ಣು ಮುಂದೆ ಇವೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ದೇವರಾಜು ಅರಸು ಅವರು ಶೋಷಿತ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಹಲವು ಯೋಜನೆಗಳನ್ನು ರೂಪಿಸಿಸುವುದರ ಜತೆಗೆ ಉಳುವವನೇ ಭೂಮಿ ಒಡೆಯ, ಎಲ್ಲ ವರ್ಗದವರಿಗೂ ಭೂಮಿ ಸಿಗಬೇಕು ಎಂದು ಹೇಳಿ ಈ ರೀತಿ ಕಾನೂನನ್ನು ಜಾರಿಗೆ ತಂದು ಅನುಕೂಲ ಕಲ್ಪಿಸಿದರು ಎಂದರು.
ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪಿ.ಶಶಿ ಕುಮಾರ್, ಪ್ರಗತಿಪರ ಸಂಘಟಕ ಕೆ.ಟಿ.ಶಿವಕುಮಾರ್, ಪುರಸಭಾ ಸದಸ್ಯೆ ಪ್ರಮೀಳಾ, ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ರಾಜೇಂದ್ರ, ಅಹಿಂದ ಸಂರಕ್ಷಣಾ ವೇದಿಕೆಯ ದಾಕ್ಷಾಯಿಣಿ, ಕದಸಂಸ ರಮಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ, ಮಾಜಿ ಅಧ್ಯಕ್ಷ ರವಿ ಅಂಕನಾಥಪುರ, ನಿವೃತ್ತ ಶಿಕ್ಷಕ ಚೆನ್ನಪ್ಪ ಮುಖಂಡರಾದ ನಾಗೇಶ್, ನಾಗರಾಜ್, ಪುಟ್ಟ ಸ್ವಾಮಿ, ಆಲೂರು ಕುಮಾರ್ ಸುರೇಶ್, ರಾಚಯ್ಯ, ಮೋಹನ್ ಇದ್ದರು.