

ಚಿಂತಾಮಣಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕನ್ನಡಿಗರು ಸೇರಿ 28ಕ್ಕೂ ಹೆಚ್ಚು ಪ್ರವಾಸಿಗರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ತಹಸೀಲ್ದಾರ್ ವೃತ್ತದಲ್ಲಿ ಮೇಣದ ದೀಪ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಸಾಪ ಅಧ್ಯಕ್ಷ ಎನ್.ವಿ. ಶ್ರೀನಿವಾಸ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ್ದ ಹಿಂದು ಹಾಗೂ ವಿದೇಶಿ ಪ್ರವಾಸಿಗರನ್ನು ನಿರ್ದಯವಾಗಿ ಗುಂಡಿಟ್ಟು ಕೊಲೆ ಮಾಡಿರುವುದು ದುಃಖಕರ ಘಟನೆಯಾಗಿದೆ. ನಾಗರಿಕರನ್ನು ಗುರಿಯಾಗಿಸಿ ಗುಂಡು ಹೊಡೆದಿರುವುದು ಹೇಯಕೃತ್ಯ. ಈ ಅಮಾನವೀಯ ಕೃತ್ಯವನ್ನು ಕಸಾಪ ಉಗ್ರವಾಗಿ ಖಂಡಿಸುತ್ತದೆ. ಭಾರತ ಸರ್ಕಾರ ಈ ಉಗ್ರರನ್ನು ಮತ್ತು ಇವರ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಕರವೇ ನಾಗರಾಜು ಮಾತನಾಡಿ, ಉಗ್ರರ ಕೃತ್ಯ ಖಂಡನೀಯ. ಇಂತಹ ಸಂದರ್ಭದಲ್ಲಿ ಭಾರತಿಯರೆಲ್ಲರೂ ಒಗ್ಗಟ್ಟಿನಿಂದ ಸರ್ಕಾರದೊಂದಿಗೆ ಕೈಜೋಡಿಸಿ ನೈತಿಕ ಬೆಂಬಲ ನೀಡಬೇಕು. ಇಂತಹ ಹೇಡಿ ಕೃತ್ಯ ಎಸಗಿದ ಉಗ್ರರಿಗೆ ಧಿಕ್ಕಾರ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಎ.ಪ್ರಕಾಶ್, ಕಾರ್ಯದರ್ಶಿ ಕುಂಟಿಗಡ್ಡೆ ಎಂ. ಲಕ್ಷ್ಮಣ್, ಕೆ.ಎನ್.ರಮಣಾರೆಡ್ಡಿ, ಬೇಟರಾಯಪ್ಪ,ಗುರುಪ್ರಸನ್ನ, ಮಸ್ತಾನ್ ವಲಿ, ಶ್ರೀರಾಮರೆಡ್ಡಿ, ಎಸ್.ಎನ್.ರಂಗನಾಥ, ಚಿರಂತ್, ವಿ. ರಮೇಶ್ ನಾಗರಾಜು, ಕರವೇ ನಾಗರಾಜು, ಎಂ.ಎಸ್.ಶ್ರೀನಿವಾಸಪ್ಪ, ಶಿ.ಮ. ಮಂಜುನಾಥ್, ಸುಬ್ರಮಣಿ, ಡಿ.ವಿ. ಶಂಕರರೆಡ್ಡಿ, ಶಿವಣ್ಣ, ಗೋಲ್ಡ್ ಕೃಷ್ಣ, ಪರಮೇಶ್, ಜೆ.ವಿ. ವೆಂಕಟೇಶ್ವರರಾವ್, ಎಂ.ವಿ.ರಮೇಶ್ ಮತ್ತಿತರರು ಭಾಗವಹಿಸಿದ್ದರು.