ದಬ್ಬಾಳಿಕೆ ನಡುವೆಯೂ ಬೆಳೆದು ನಿಂತಿದೆ ಕನ್ನಡ ಭಾಷೆ

HLR KASAPAAAAAAAAAAAAA
Published on

ಹೊಳೆಆಲೂರ: ಪ್ರಪಂಚದ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಎರಡು ಸಾವಿರ ವರ್ಷಗಳಿಂದ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಸೇರಿ ಹಲವು ಭಾಷೆಗಳ ದಬ್ಬಾಳಿಕೆ ಎದುರಿಸಿದ್ದರೂ ಅದನ್ನು ಮೀರಿ ಬೆಳೆದು ಬಂದಿದೆ. ಸೂರ್ಯ, ಚಂದ್ರರು ಇರುವವರೆಗೆ ಅದು ನಿರಂತರವಾಗಿರಲಿದೆ ಎಂದು ಉಪನ್ಯಾಸಕ ಎಸ್.ವಿ. ಹಳ್ಳೂರ ಹೇಳಿದರು.


ಹೊಳೆಆಲೂರ ಕಸಾಪ ಹೋಬಳಿ ಘಟಕದ ವತಿಯಿಂದ ಕೆ.ಎಫ್. ಕಲ್ಲಾಪೂ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೆ ಅಂಗಳದಲ್ಲಿ ಸಾಹಿತ್ಯ ಸಂಜೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು.


ಅಧ್ಯಕ್ಷತೆ ವಹಿಸಿದ ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೀರಯ್ಯ ವಸ್ತ್ರದ ಮಾತನಾಡಿ, ನೂರಾರು ವರ್ಷ ಭವ್ಯ ಇತಿಹಾಸವಿರುವ ಕಸಾಪ ವತಿಯಿಂದ ಭಾಷೆ ಅಭಿವೃದ್ಧಿಗಾಗಿ ಹಲವು ಯೋಜನೆ ಹಾಕಿಕೊಳ್ಳಲಾಗುವುದು. ಜತೆಗೆ ಕಲೆ, ಸಾಹಿತ್ಯ, ಕವನ, ಜಾನಪದ, ಡೊಳ್ಳು ಕುಣಿತ, ಕರಡಿಮಜಲು ಸೇರಿ ಎಲ್ಲ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.


ಶೋಭಾ ಆಡಿನ, ಅಂಬಕ್ಕ ಚಿತ್ರಗಾರ, ಈಶ್ವರ ಕುರಿ, ಪಾರ್ವತಿ ಸಾಸಳ್ಳಿ, ಮುತ್ತು ಕೊಣ್ಣೂರ ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net