ರಸ್ತೆ ಬದಿಗೆ ಮಗುಚಿ ಬಿದ್ದ ಜೀಪು

ರಸ್ತೆ ಬದಿಗೆ ಮಗುಚಿ ಬಿದ್ದ ಜೀಪು
Published on

ನಾಪೋಕ್ಲು: ಸಮೀಪದ ಮರಂದೋಡ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪು ರಸ್ತೆ ಬದಿಗೆ ಮಗುಚಿದ ಪ್ರಕರಣ ಭಾನುವಾರ ನಡೆದಿದೆ.

ಮರಂದೋಡ ಗ್ರಾಮದ ಚೋಯಮಾಡಂಡ ಹರೀಶ್ ಮೊನ್ನಪ್ಪ ಎಂಬುವವರ ಜೀಪು ರಸ್ತೆ ಬದಿಗೆ ಮಗುಚಿ ಬಿದ್ದಿದ್ದು, ಜೀಪಿನಲ್ಲಿದ್ದ ಹರೀಶ್ ಮುನ್ನಪ್ಪ, ಸಂಬಂಧಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಜೀಪನ್ನು ಮೇಲೆತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net