ಆಧುನಿಕ ಯುಗದಲ್ಲಿ ಎತ್ತುಗಳ ಪ್ರಾಮುಖ್ಯತೆ ಕ್ಷೀಣ

ಕಾರಟಗಿಯಲ್ಲಿ ಹಮ್ಮಿಕೊಂಡಿದ್ದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ರೈತ ಮುಖಂಡರು ಚಾಲನೆ ನೀಡಿದರು. ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ, ಪ್ರಮುಖರಾದ ಮರಿಯಪ್ಪ ಸಾಲೋಣಿ, ಶರಣಪ್ಪ ದೊಡ್ಡಮನಿ, ಅಯ್ಯಪ್ಪ ಉಪ್ಪಾರ್, ನಾರಾಯಣಪ್ಪ ಈಡಿಗೇರ್, ಉಮೇಶ ಚಿನಿವಾಲ, ವೀರೇಶ ಇತರರಿದ್ದರು.
ಕಾರಟಗಿಯಲ್ಲಿ ಹಮ್ಮಿಕೊಂಡಿದ್ದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ರೈತ ಮುಖಂಡರು ಚಾಲನೆ ನೀಡಿದರು. ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ, ಪ್ರಮುಖರಾದ ಮರಿಯಪ್ಪ ಸಾಲೋಣಿ, ಶರಣಪ್ಪ ದೊಡ್ಡಮನಿ, ಅಯ್ಯಪ್ಪ ಉಪ್ಪಾರ್, ನಾರಾಯಣಪ್ಪ ಈಡಿಗೇರ್, ಉಮೇಶ ಚಿನಿವಾಲ, ವೀರೇಶ ಇತರರಿದ್ದರು.
Published on

ಕಾರಟಗಿ: ಕೃಷಿ ವಲಯದ ಪ್ರಮುಖ ಭಾಗವಾಗಿರುವ ಎತ್ತುಗಳು ಭಾರ ಎಳೆಯುವ ಸ್ಪರ್ಧೆಯಿಂದ ಶಕ್ತಿ ಮತ್ತು ಸಹಿಷ್ಣುತೆ ಸಾರುತ್ತವೆ ಎಂದು ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ಆವರಣದಲ್ಲಿ ಮುಂಗಾರು ಹಂಗಾಮಿನ ಹಿನ್ನೆಲೆ ಮಂಗಳವಾರ ರೈತರು ಹಮ್ಮಿಕೊಂಡಿದ್ದ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾತನ ಕೃಷಿ ಪದ್ಧತಿಯಲ್ಲಿ ಜಾನುವಾರುಗಳಿಂದ ಕೃಷಿ ಕಾರ್ಯ ನಡೆಸುತ್ತಿದ್ದರು. ತಂತ್ರಜ್ಞಾನ ಬೆಳವಣಿಗೆಯಿಂದ ಜಾನುವಾರುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಆದರೆ, ಎತ್ತುಗಳೊಂದಿಗೆ ಭಾವನಾತ್ಮಕ ಬೆಸುಗೆಯಿಂದ ಕೃಷಿಕರು ಇಂದಿಗೂ ಜಾನುವಾರುಗಳನ್ನು ಸಾಕಿ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಎತ್ತುಗಳು ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಪಾತ್ರ ವಹಿಸುತ್ತವೆ ಎಂದರು.

ರೈತ ಮುಖಂಡ ಮರಿಯಪ್ಪ ಸಾಲೋಣಿ ಮಾತನಾಡಿ, ಎತ್ತುಗಳು ರೈತರ ಬೆನ್ನೆಲುಬಾಗಿ ಜೀವಿಸಿದ್ದು, ಸಂಕಷ್ಟದ ಸಮಯದಲ್ಲೂ ದೃಢತೆ ಸಂಕೇತವಾಗಿ ಗುರುತಿಸಿಕೊಂಡಿವೆ. ಗ್ರಾಮೀಣ ಸಂಸ್ಕೃತಿ ಮುಂದುವರೆಸುವ ಭಾಗವಾಗಿ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ಪ್ರೇರಣೆಯಾಗಿದೆ ಎಂದರು.

ಪ್ರಥಮ ಸ್ಥಾನ ಗಳಿಸಿದ ರಮೇಶ ಬೆಳಗೊಂಡಗೆ 5ತೊಲೆ ಬೆಳ್ಳಿ ಕಡಗ, ದ್ವಿತೀಯ ಸ್ಥಾನಗಳಿಸಿದ ಶ್ರೀನಿವಾಸ ದಾಸರ್‌ಗೆ 3 ತೊಲೆ ಬೆಳ್ಳಿ ಕಡಗ, ತೃತೀಯ ಸ್ಥಾನ ಪಡೆದ ಹೊಸಗೇರಪ್ಪ ಹಳೆಮನಿಗೆ 2ತೊಲೆ ಬೆಳ್ಳಿ ಕಡಗ ಹಾಗೂ ವಿಜೇತ ಎತ್ತುಗಳಿಗೆ ಗೆಜ್ಜೆಗಳು, ಹಣೆಕಟ್ಟು ವಿತರಿಸಲಾಯಿತು.

ಪ್ರಮುಖರಾದ ಶರಣಪ್ಪ ದೊಡ್ಡಮನಿ, ಅಯ್ಯಪ್ಪ ಉಪ್ಪಾರ್, ನಾರಾಯಣಪ್ಪ ಈಡಿಗೇರ್, ಉಮೇಶ ಚಿನಿವಾಲ, ವೀರೇಶ ಬೇವಿನಾಳ, ಶರಣಪ್ಪ ಪರಕಿ, ರಮೇಶ ಭಂಗಿ, ಖಾದರ್‌ಬಾಷಾ, ಹನುಮಂತಪ್ಪ ಉಳೇನೂರು, ಶರಣಪ್ಪ ಕೋಟ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net