ತಾವರಗೇರಾ: ಪಟ್ಟಣದ ಶ್ರೀ ತ್ರಿ ವೀರಭದ್ರೇಶ್ವರ ಜಾತ್ರೋತ್ಸವದ ನಿಮಿತ್ತ ಬುಧವಾರ ಎತ್ತುಗಳ ಶಕ್ತಿ ಪ್ರದರ್ಶನ ಸ್ಪರ್ಧೆ ನಡೆಯಿತು. ಗುಡದೂರ ಸುಕ್ಷೇತ್ರದ ಶ್ರೀ ಗುರಯ್ಯ ತಾತ ಅವರು, ಕಲ್ಲು ಎಳೆಯುವ ಸ್ಪರ್ಧೆಗೆ ಎತ್ತುಗಳಿಗೆ ಪೂಜೆಸಲ್ಲಿಸಿ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಒಟ್ಟು 11 ಜೋಡಿ ಎತ್ತುಗಳು ಭಾಗವಹಿಸಿದ್ದವು.
ಯಚೂರು ಜಿಲ್ಲೆಯ ಇರಬಗೇರಾದ ರೈತ ಲಕ್ಷ್ಮೀ ರಂಗನಾಥ ಅವರ ಎತ್ತುಗಳು (ಪ್ರಥಮ ), ಜಿಲ್ಲೆಯ ನವಲಕಲ್ ಗ್ರಾಮದ ರೈತ ಎನ್.ಜಿ.ಕಿಚ್ಚನಾಯಕ ಅವರ ಎತ್ತುಗಳು (ದ್ವಿತೀಯ), ನವಲಕಲ್ ಗ್ರಾಮದ ರಿಚ್ ಬಾಯ್ಸ ಇವರ ಎತ್ತುಗಳು (ತೃತೀಯ) ಪಡೆದುಕೊಂಡವು. ಪ್ರಥಮ ಸ್ಥಾನಕ್ಕೆ ರೂ.21, 000 ರೂ., ದ್ವಿತೀಯ 15000 ರೂ., ತೃತೀಯ 11000 ರೂ. ಬಹುಮಾನ ವಿತರಿಸಲಾಯಿತು. 1.5 ಟನ್ ತೂಕದ ಕಲ್ಲನ್ನು ಕಡಿಮೆ ಅವಧಿಯಲ್ಲಿ ಎಳೆದ ಎತ್ತುಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಕಮೀಟಿಯ ಸದಸ್ಯರಾದ ವೀರಭದ್ರಪ್ಪ ನಾಲತವಾಡ , ಆದಪ್ಪ ನಾಲತವಾಡ , ದೊಡ್ಡಪ್ಪ ಗುಡದೂರ ,ಬಸನನಗೌಡ ಸರನಾಯಕ, ಮುತ್ತಣ್ಣ ಸರನಾಯಕ, ದೊಡ್ಡಪ್ಪ ಚಿಟ್ಟಿ ಇತರರಿದ್ದರು.