ಪತ್ನಿ ಕೊಲೆ ಮಾಡಿ ಆರು ವರ್ಷದ ನಂತರ ಸಿಕ್ಕಿ ಬಿದ್ದ ಪತಿ

Published on

ಮಾಗಡಿ: ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿ ಕಳೆದ ಆರು ವರ್ಷಗಳಿಂದಲೂ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದ ಪತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ತಾಲೂಕಿನ ಹೂಜಗಲ್ಲು ಗ್ರಾಮದ ನಿವಾಸಿ ಕಿರಣ್  ಮತ್ತೊಂದು  ಕೊಲೆ ಪ್ರಕರಣವೊಂದರಲ್ಲಿ ಬಂದಿತನಾಗಿ ತನ್ನ ಪತ್ನಿಯ ಸಾವಿನ ರಹಸ್ಯವನ್ನು ಬಿಚ್ಚಿಟ್ಟ ಭೂಪ.

ಹುಲಿಯೂರು ದುರ್ಗ ಹೋಬಳಿಯ  ತಿಪ್ಪಯ್ಯನ ಪಾಳ್ಯ ನಿವಾಸಿ ಗೌರಮ್ಮ ಪುತ್ರಿ ಪೂಜಾ ಎಂಬುವರನ್ನು 8 ವರ್ಷದ ಹಿಂದೆ ಕಿರಣ್ ವಿವಾಹವಾಗಿದ್ದ. ಆದರೆ ಆಕೆಯ ಶೀಲವನ್ನು ಶಂಕಿಸಿದ್ದ ಕಿರಣ್  2019ರ ಮೇ 26ರಂದು ಪೂಜಾಳನ್ನು ಮಾವಿನ ಕಾಯಿ ಕೀಳುವುದಾಗಿ ನಂಭಿಸಿ ಗ್ರಾಮದ ಸಮೀಪದಲ್ಲಿರುವ ಚೀಲೂರು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಇಲ್ಲಿ ತನ್ನ ಸ್ನೇಹಿತಾದ ನಾಗಶೆಟ್ಟಹಳ್ಳಿ ಭರತ, ಹೂಜಗಲ್ಲು ಗ್ರಾಮದ ಕುಮಾರ ಜೊತೆ ಸೇರಿಕೊಂಡು  ಕೊಲೆಮಾಡಿ ಹೂತು ಹಾಕಿದ್ದ. ಸಲ್ಪ ದಿನಗಳ ನಂತರ ಚೀಲೂರು ಕಾಡಿನಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡಲು ಗುಂಡಿ ತೆಗೆಯುವ ಬಗ್ಗೆ ತಿಳಿದ ಕಿರಣ್ ಭಯಬೀತನಾಗಿ ಹೂತಿಟ್ಟ ಗುಂಡಿಯಿಂದ ಮೃತದೇಹವನ್ನುತೆಗೆದು,  ತನ್ನ ಮನೆಯ ಬಳಿಯ ಜಮೀನಿನಲ್ಲಿ ಕಣ ಮಾಡಲು ತೆಗೆದಿದ್ದ ಗುಂಡಿಗೆ ಹಾಕಿ ಕಲ್ಲಿನಿಂದ ಮುಚ್ಚಿದ್ದ. ಎರಡು ವರೆ ವರ್ಷದ ನಂತರ ಶವದ ಮೂಳೆಗಳನ್ನು ಸುಟ್ಟುಹಾಕಿದ್ದಾನೆ.

ಇದೆಲ್ಲದರ ನಡುವೆ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ಕೊಡಲು ಹೋಗಿ ಭಯಗೊಂಡ ವಾಪಾಸ್​ ಮನೆಗೆ ಬಂದ್ದು, ಕುಟುಂಸ್ಥರನ್ನು ನಾಪತ್ತೆ ನೆಪದಲ್ಲಿ ನಂಬಿಸುವ ಕೆಲಸ ಮಾಡಿಕೊಂಡು ಬಂದಿದ್ದಾನೆ.

ಕೊನೆಗೂ ಸಿಕ್ಕಿ ಬಿದ್ದ:  ಆ. 12 ರಂದು ಹೂಜಗಲ್ಲು ಬೆಟ್ಟದ ಬಸವಣ್ಣ ದೇವಾಲಯ ಬಳಿ ಕುರುಪಾಳ್ಯದ ಉಮೇಶ ಎಂಬಾತ ತನ್ನ ಪತ್ನಿ ದಿವ್ಯಾಳನ್ನು ಪತಿ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ, ಸಹಚರರಾದ ರೋಹಿತ್, ಶಶಾಂಕ್, ಭರತ್, ಕಿರಣ್ ನನ್ನ ಬಂಧಿಸಿ ಹಿನ್ನೆಲೆ ಪರಿಶೀಲನೆಗೆ ನಿಂತ ಮಾಗಡಿ ಪೊಲೀಸರಿಗೆ ಕಿರಣ್​ನ ಮತ್ತೊಂದು ಪ್ರರಕಣ ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತನ್ನ ಪತ್ನಿಯನ್ನು ತಾನೇ ಕೊಂದಿರುವ ರಹಸ್ಯವನ್ನು ಕಿರಣ್ ಬಾಯಿ ಬಿಟ್ಟಿದ್ದಾನೆ.

ಈ ಸಂಬಂಧ ತಹಶೀಲ್ದಾರ್ ಶರತ್ ಕುಮಾರ್, ಎಫ್‌ಎಸ್‌ಎಲ್ ತಂಡ, ಇನ್ಸ್ಪೆಕ್ಟರ್ ಜಿ ವೈ.ಗಿರಿರಾಜು ಸ್ಥಳಕ್ಕೆ ಬೇಟಿ ನೀಡಿ ಕೊಲೆ ಮಾಡಿದ ಸ್ಥಳ ಹಾಗೂ ಮೂಳೆಗಳನ್ನು ಸುಟ್ಟು ಹಾಕಿದ ಸ್ಥಳವನ್ನು ಪರಿಶೀಲನೆ ನಡೆಸಿ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net