ವಿವಾಹಿತೆ ಮದುವೆ ವಂಚನೆ ಆರೋಪ ಮಾಡುವಂತಿಲ್ಲ: ಹೈಕೋರ್ಟ್​​

couple court
Published on

ಬೆಂಗಳೂರು: ಮದುವೆ ಒಂದು ಅದ್ಭುತವಾದ ಬಂಧ. ಈ ಸಂಬಂಧವು ಎರಡು ಜೀವಗಳನ್ನು ಒಟ್ಟಿಗೆ ಬೇಸೆಯುತ್ತದೆ. ಒಂದು ಮದುವೆ ವರ-ವಧು ಹಾಗೂ ಎರಡೂ ಕುಟುಂಬಸ್ಥರ ಜೀವನವನ್ನು ನಿರ್ಧಾರ ಮಾಡುತ್ತದೆ. ಮಕ್ಕಳು ಒಂದು ವಯಸ್ಸಿಗೆ ಬಂದಾಗ ಪೋಷಕರು ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ಹುಡುಗರ ವಿಷಯದಲ್ಲಿ ಈ ಒತ್ತಡ ಸ್ವಲ್ಪ ಕಡಿಮೆ. ಆದರೆ ಹುಡುಗಿಯರ ವಿಚಾರದಲ್ಲಿ ಸಾಮಾನ್ಯವಾಗಿ ಒತ್ತಡ ಹಾಕುವುದು ಹೆಚ್ಚಾಗಿಯೇ ಇರುತ್ತದೆ. ಆದರೆ ಇಲ್ಲೊಬ್ಬಳು ವಿವಾಹಿತ ಮಹಿಳೆ ನನಗೆ ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾಳೆ.

ಆರೋಪಿ ಪ್ರಜೀತ್ ಆರ್. ಎಂಬ ವ್ಯಕ್ತಿ, ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾನೆಂದು ಮಹಿಳೆಯೊಬ್ಬರು ಆರೋಪಿಸಿ ಕೋರ್ಟ್​​ ಮೆಟ್ಟಿಲೇರಿರುವ ಕುರಿತಾಗಿ ಹೈಕೋರ್ಟ್​​ ಮಹತ್ತರವಾದ ತೀರ್ಪು ನೀಡಿದೆ.

Indian Couple

ಮಹಿಳೆ ಆರೋಪವೇನು?: ಪ್ರಜೀತ್ ನನ್ನ ಸ್ನೇಹ ಬೆಳೆಸಿದ್ದನು. ನಂತರ ಹಣಕಾಸಿನ ನೆರವು ಸಹ ನೀಡಿದ್ದನು. ಆದರೆ, ಆತ ವಿದೇಶಕ್ಕೆ ತೆರಳಿದ ನಂತರ ನನ್ನಿಂದ ದೂರವಾಗಿದ್ದಾನೆ.ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಮಹಿಳೆ ಆರೋಪಿಸಿ ದೂರು ಸಲ್ಲಿಸಿದ್ದರು.

ಆರೋಪಿ ಪ್ರಜೀತ್. ಆರ್ ಸ್ಪಷ್ಟನೆ: ದುಡ್ಡಿನ ಅಗತ್ಯವಿದ್ದುದರಿಂದ ಆರ್ಥಿಕ ಸಹಾಯ ಮಾಡಿದ್ದೆ. ನಾನು ಮದುವೆಯಾಗುವುದಾಗಿ ಭರವಸೆ ನೀಡಿಲ್ಲ, ಏಕೆಂದರೆ ಆಕೆಗೆ ಮದುವೆಯಾಗಿ ಒಂದು ಮಗುವೂ ಇದೆ. ಆಕೆ ಈಗಾಗಲೇ ಆಗಿರುವ ಮದುವೆಯಿಂದ ಹೊರಬರದ ಹೊರತು ಮಾಡುತ್ತಿರುವ ಆರೋಪ ಊರ್ಜಿತವಾಗದು,'' ನ್ಯಾಯಾಲಯಕ್ಕೆ ತಿಳಿಸಿದ್ದನು.

ಆತನ ವಿರುದ್ಧದ ಐಪಿಸಿ 498 ಎ, 417 ಕೇಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಮತ್ತರರವಾದ ಆದೇಶ ನೀಡಿದೆ.

Court

ಕೋರ್ಟ್​​ ಹೇಳಿದ್ದೇನು?: ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾನೆಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಆಕೆಗೆ ಆಗಲೇ ಮದುವೆಯಾಗಿ ಒಂದು ಮಗುವೂ ಇದೆ. ಈಗಾಗಲೇ ಮದುವೆಯಾಗಿರುವುದರಿಂದ ಮತ್ತೆ ಮದುವೆಯಾಗುತ್ತೇನೆಂದು ಭರವಸೆ ನೀಡಿ ವಂಚನೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅರ್ಜಿದಾರನ ವಿರುದ್ಧ ಮಾಡಿರುವ ಆರೋಪವನ್ನು ಒಪ್ಪಲಾಗದು,'' ಎಂದು ಆತನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.

''ವಿವಾಹಿತ ಮಹಿಳೆ ಮೊದಲ ಪತಿಯಿಂದ ವಿಚ್ಛೇದನ ಪಡೆದಿಲ್ಲ. ವಿಚ್ಛೇದನವಾಗದೇ ಮತ್ತೊಬ್ಬನನ್ನು ಪತಿಯಾಗಿ ಪಡೆಯಲು ಸಾಧ್ಯವಿಲ್ಲ. ವಿವಾಹವಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಹೂಡುವಂತಿಲ್ಲ,'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net