

> ಮುಂಗಾರು ಕೈಕೊಟ್ಟ ಆತಂಕದಲ್ಲಿದ್ದ ರೈತರ ಮೊಗದಲ್ಲೀಗ ಸಂತಸ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆಯ ಉತ್ತಮ ಆರಂಭದಿಂದ ರಾಗಿ ಫಸಲು ನಳನಳಿಸುತ್ತಿದ್ದು, ರೈತರ ಮೊಗದಲ್ಲಿ ಸಂತಸ ತರಿಸಿದೆ.
ತಾಲೂಕಿನ ಕಸಬಾ, ಕೈಲಾಂಚ ಹೋಬಳಿಯಲ್ಲಿ ಅರ್ಕಾವತಿ, ಬಿಡದಿಯಲ್ಲಿ ವೃಷಭಾವತಿ, ಕೂಟಗಲ್ನ ಕಣ್ವ ಹೊಳೆ ತೀರದಲ್ಲಿ ನೀರಾವರಿ ಸೌಲಭ್ಯವಿರುವ ಕೆಲ ಗ್ರಾಮ ಹೊರತು ಪಡಿಸಿ ಉಳಿದಂತೆ ಬೆಟ್ಟಗುಡ್ಡದ ಪ್ರದೇಶವಾಗಿರುವ ಕಾರಣ ಬಹುತೇಕರು ಮಳೆಯಾಶ್ರಿತ ರಾಗಿ, ಭತ್ತ ಬೆಳೆದರೆ ಬೋರ್ವೆಲ್ ಕೊರೆಸಿರುವ ಕೆಲವರು
ಮಾವು, ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಒಂದಷ್ಟು ಬಿತ್ತನೆ ತಡವಾಗಿತ್ತು. ಆದರೂ ಬಿದ್ದ ಮಳೆಯಲ್ಲೇ ಭೂಮಿ ಹದ ಮಾಡಿದ ರೈತರು ರಾಗಿ ಬಿತ್ತನೆ ಮಾಡಿದ್ದರು. ಈ ನಡುವೆ ಮಳೆ ಕೊರತೆ ಉಂಟಾಗಿ ಬೆಳೆ ನೆಲಕಚ್ಚುತ್ತಿತ್ತು, ಆದರೆ ಅಕ್ಟೋಬರ್ ಮೊದಲ ವಾರದಿಂದ ಸುರಿದ ಉತ್ತಮ ಮಳೆ ರಾಗಿ ಪೈರು ಬೆಳವಣಿಗೆಗೆ ಪೂರಕವಾಗಿದ್ದು, ಸದ್ಯ ರಾಗಿ ತೆನೆ ಬಿಟ್ಟು, ಹೊಲದಲ್ಲಿ ನಳನಳಿಸುತ್ತಿದೆ.
ಕೃಷಿ ಇಲಾಖೆ ಅಂದಾಜಿನ ಪ್ರಕಾರ ತಾಲೂಕಿನಲ್ಲ್ಲಿ 6,630 ಹೆಕ್ಟೇರ್ನಲ್ಲಿ 90 ದಿನಗಳಲ್ಲಿ ಬೆಳೆ ಬರುವ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಜಿಪಿ 28, 115&120 ದಿನಗಳಲ್ಲಿ ಬರುವ ಎಂಆರ್&6, ಎಂಆರ್&1, ಎಂಎಲ್&365 ಸೇರಿ ವಿವಿಧ ತಳಿಯ ರಾಗಿ ಬಿತ್ತಿದ್ದಾರೆ. ತೊಗರಿ 150, ಅಲಸಂದೆ 50, ನೆಲಗಡಲೆ 11, ಹುರುಳಿ 490 ಹಾಗೂ ಅವರೆ 175, ಭತ್ತ 431, ಮುಸುಕಿನ ಜೋಳ 25 ಹೆಕ್ಟೇರ್ ಸೇರಿ ಒಟ್ಟು 7,980 ಹೆಕ್ಟೇರ್ನಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಈಗಾಗಲೇ ರಾಗಿ ತೆನೆ ಉತಷ್ಟವಾಗಿ ಬಂದಿದ್ದು, ಕೆಲವೆಡೆ ಕಾಳು ಕಟಟ್ಟಿದ್ದರೆ, ಇನ್ನುಕೆಲವೆಡೆ ಹಾಲು ತೆನೆಗಳು ಕಾಣುತ್ತಿವೆ. ನವೆಂಬರ್ 2ನೇ ವಾರದಲ್ಲಿ ರಾಗಿ ಕಟಾವಿಗೆ ಬರಲಿದ್ದು, ರೈತರು ಕಟಾವಿನ ಸಿದ್ಧತೆಯಲ್ಲಿ ತೊಡಗಿದ್ದಾರೆ.
ವಾರದಿಂದ ಮಳೆ ಆಗಿಂದಾಗ್ಗೆ ಸುರಿಯುತ್ತಿದ್ದು, ಇದೇ ರೀತಿ ಮುಂದುವರಿದರೆ ಪೈರು ನೆಲ ಕಚ್ಚಿ, ಫಸಲು ನಷ್ಟವಾಗುವ ಆತಂಕವಿದ್ದು, ಕೆಲ ಜಮೀನುಗಳಲ್ಲಿ ಪೈರು ನೆಲಕ್ಕೆ ಬಿದ್ದಿರುವ ದೃಶ್ಯಗಳೂ ಕಂಡುಬಂದಿವೆ. ಸಮ ಪ್ರಮಾಣದಲ್ಲಿ ಮಳೆಯಾದರಷ್ಟೇ ರಾಗಿ ಫಸಲು ಉತ್ತಮವಾಗಿ ಮನೆ ಸೇರುತ್ತದೆ ಎನ್ನುತ್ತಾರೆ ಅವ್ವೇರಹಳ್ಳಿ ರೈತ ನವೀನ್.
ಈ ಭಾಗದಲ್ಲಿ ರಾಗಿ ಜತೆಗೆ ತೊಗರಿ, ಸಾಸಿವೆ, ಅಲಸಂದೆ, ಜೋಳ, ಅವರೆ, ಹುರುಳಿ ಬೆಳೆಯಲಾಗುತ್ತದೆ. ಮಳೆ ಉತ್ತಮವಾದ ಕಾರಣ ರಾಗಿ ಕಟಾವಿನ ನಂತರ ಬರುವ ಸಾಲು ಬೆಳೆಗಳಿಗೂ ಮಳೆ ಪೂರಕವಾಗುವ ಜತೆಗೆ ಭೂಮಿಗೆ ಹದ ನೀಡಿದ್ದರಿಂದ ರೈತರು ಮುಂದೆ ಉತ್ತಮ ಸಾಲುಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. ರಾಗಿ ಹಾಗೂ ಸಾಲು ಜೋಳದಿಂದ ಜಾನುವಾರುಗಳಿಗೆ ಹಸಿರು ಮೇವು ಸಹ ಸಿಗುತ್ತದೆ.
ಈಬಾರಿ ಮುಂಗಾರು ಮಳೆಗೆ ತಾಲೂಕಿನಲ್ಲಿ 7,980 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ, ಸಾಲು ಬೆಳೆ ಹಾಗೂ ಭತ್ತ ಬಿತ್ತನೆ ಕೈಗೊಂಡಿದ್ದಾರೆ. ಮುಂಗಾರಿನ್ಲಲಿ ಹಿನ್ನಡೆಯಾದರೂ ಅಕ್ಟೋಬರ್ ಪ್ರಾರಂಭದಿಂದ ಮಳೆಯಾಗುತ್ತಿರುವ ಕಾರಣ ರಾಗಿ ಉತ್ತಮ ಫಸಲು ಕಾಣುತ್ತಿದೆ. ಅಕ್ಟೋಬರ್ನಲ್ಲಿ ವಾಡಿಕೆ(128 ಮಿಮೀ)ಗಿಂತ ಶೇ.28 (180ಮಿಮಿ) ಮಳೆ ಹೆಚ್ಚಳವಾಗಿದೆ.ಎಚ್.ಆರ್.ಪ್ರಮೋದ್ಕುಮಾರ್ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ರಾಮನಗರಸೆಪ್ಟೆಂಬರ್ ಕೊನೇವಾರ ಮತ್ತು ಅಕ್ಟೋಬರ್ ಪ್ರಾರಂಭದಲ್ಲಿ ಬಿದ್ದ ಮಳೆಯಿಂದ ರಾಗಿ ತೆನೆಗಳು ಉತ್ತಮವಾಗಿ ಬಂದಿದ್ದು, ಕಟಾವು ಸಮಯದಲ್ಲಿ ಜಡಿ ಮಳೆ ಬರದಿದ್ದರೆ ಉತ್ತಮ ಫಸಲು ರೈತರ ಕೈ ಸೇರುತ್ತದೆ.ರಾಜಶೇಖರ್ ರೈತ, ಕೈಲಾಂಚ