ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಗುರು

ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಗುರು
Published on

ಶ್ರೀರಂಗಪಟ್ಟಣ: ಗುರುಪರಂಪರೆ ಸಮಾಜದ ಜನತೆಯನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಜ್ಞಾನದ ಬೆಳಕಿನ ಕಡೆಗೆ ಮಾರ್ಗದರ್ಶನ ನೀಡಲು ಸಹಕಾರಿ ಎಂದು ಕೃಷಿಕ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ ಹನುಮಂತು ಹೇಳಿದರು.

ತಾಲೂಕಿನ ಅರಕೆರೆ ಗ್ರಾಮದ ಕಸ್ತೂರಿಬಾ ವೃದ್ದಾಶ್ರಮದಲ್ಲಿ ಗುರುವಾರ ಕೃಷಿಕ ಅಲೆಯನ್ಸ್ ಸಂಸ್ಥೆ ಗುರು ಪೂರ್ಣಿಮಾ ಪ್ರಯಕ್ತ ಆಯೋಜಿಸಿದ್ದ ಆಶ್ರಮ ವಾಸಿಗಳಿಗೆ ಶ್ರವಣ ಸಾಧನಗಳು, ಕುಕ್ಕರ್, ಹಾಟ್‌ಬಾಕ್ಸ್, ಪಾತ್ರೆ, ದಿನಬಳಕೆಯ ವಸ್ತುಗಳ ವಿತರಣೆ ಮತ್ತು ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗುರು-ಹಿರಿಯರನ್ನು ಗೌರವಿಸುವುದು ಹೆಚ್ಚಾಗುತ್ತಿವೆ, ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನ ನೀಡಿದ ಗುರುವರ್ಯರನ್ನು ಆಧರಣೀಯವಾಗಿ ಅಭಿನಂದಿಸಲಾಗುತ್ತಿದೆ. ಹಿಂದು ಸಂಪ್ರದಾಯದಲ್ಲಿ ಗುರು ಪೂರ್ಣಿಮೆ, ಆಷಾಢ ಹುಣ್ಣಿಮೆಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ. ಮಹರ್ಷಿ ವೇದವ್ಯಾಸರ ಜನ್ಮದಿನವಾಗಿಯೂ ಇದನ್ನು ಆಚರಿಸಲಾಗುತ್ತಿತ್ತು. ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಇದು ಅತ್ಯಂತ ಶುಭ ದಿನವಾಗಿದೆ ಎಂದರು.

ಇದೇ ವೇಳೆ ಪ್ರತಿಭಾಂಜಲಿ ಪ್ರೊ.ಡೇವಿಡ್ ಮತ್ತು ತಂಡ ಕಾರ್ಯಕ್ರಮದಲ್ಲಿ ವಿವಿಧ ಭಕ್ತಿಗೀತೆ ಮತ್ತು ಭಾವಗೀತೆಗಳನ್ನು ಹಾಡಿದ್ದು, ಆಶ್ರಮ ವಾಸಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಎ.ಆರ್.ಕುಮಾರ್, ಮೋಹನ್ ಕುಮಾರ್, ಎಂ.ಕುಮಾರ್, ನಟೇಶ್, ಸೋಮಶೇಖರ್, ಡೇವಿಡ್, ಕಿಶೋರ್, ಆಶ್ರಮದ ಮುಖ್ಯಸ್ಥ ನಟರಾಜ್, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net