

ಬೈಂದೂರು: ಬೈಂದೂರು ಪಟ್ಟಣ ಪಂಚಾಯಿತಿ ವಿಚಾರ ಈಗಾಗಲೇ ಹೈಕೋರ್ಟ್‌ನಲ್ಲಿದೆ. ಜಿಲ್ಲಾಡಳಿತ ಕಾನೂನು ವಿರುದ್ಧವಾಗಿ ನಿರ್ಣಯ ಕೈಗೊಳ್ಳುವುದು ಸಮಂಜಸವಲ್ಲ. ರೈತರ ಪಕ್ಷಾತೀತ ಹೋರಾಟಕ್ಕೆ ಜನಪ್ರತಿನಿಧಿಗಳು, ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಬೆಂಗಳೂರಿನ ವಕೀಲ ವಸಂತ್‌ರಾಜ್ ಹೊಸೂರು ಹೇಳಿದರು. ರೈತ ಸಂ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುವಾರ್ ಶೆಟ್ಟಿ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯ 13ನೇ ದಿನದ ಹೋರಾಟದಲ್ಲಿ ಮಾತನಾಡಿದರು. ಆಲಂದೂರು ಭಾಗದ ರೈತರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ರೈತರು ಚೆಂಡೆ, ವಾದ್ಯದ ಜತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗಣೇಶ ಗಂಗೊಳ್ಳಿ, ಸುರೇಶ ವಾಕೋಡಿ ಆಲಂದೂರು ಹಾಗೂ ಗೌರಿ ತಗ್ಗರ್ಸೆ ರೈತಗೀತೆ, ಜಾನಪದ ಗಾಯನ ನಡೆಸಿಕೊಟ್ಟರು. ಪುರುಷ ಮತ್ತು ಮಹಿಳಾ ರೈತರು, ಮುಖಂಡರು ಇದ್ದರು.
ರೈತರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಶುಕ್ರವಾರ ಭೇಟಿ ನೀಡಿ, ರೈತರ ಬೇಡಿಕೆಗಳನ್ನು ಆಲಿಸಿದರು. ಬಳಿಕ ವಾತನಾಡಿದ ಅವರು ಈಗಾಗಲೇ ಬೈಂದೂರು ತಾಲೂಕು ರೈತ ಸಂ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಜಿಲ್ಲಾಡಳಿತ ಈಗಾಗಲೇ ಇದರ ವಾಸ್ತವತೆ ಕುರಿತು ವರದಿ ನೀಡಿತ್ತು. ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ರೈತ ಸಂಟನೆ ನಡೆಸುತ್ತಿರುವ ಹೋರಾಟದ ವಾಹಿತಿ ಮತ್ತು ಜಿಲ್ಲಾಡಳಿತ ವರದಿಯನ್ನು ಶ್ರೀ ಸರ್ಕಾರಕ್ಕೆ ತಲುಪಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ತಹಸೀಲ್ದಾರ್ ರಾಮಚಂದ್ರಪ್ಪ ಇದ್ದರು.