ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುತ್ತಿದೆ ಸರ್ಕಾರ

29KMT1_Dinakar Shetti
Published on

ಕುಮಟಾ: ಹಿಂದೆ ಬಿಜೆಪಿ ಸರ್ಕಾರ ಎಲ್ಲ ಸಂದರ್ಭದಲ್ಲೂ ಅರಣ್ಯವಾಸಿಗಳ ಪರವಾಗಿ ಇದ್ದು, ಅವರಿಗೆ ರಕ್ಷಣೆ ನೀಡಿದೆ. ಜಿಪಿಎಸ್ ಹೊಂದಿರುವ ಎಲ್ಲ ಅತಿಕ್ರಮಣದಾರರಿಗೂ ಮನೆ ಮಂಜೂರಿ ಮಾಡಿ, ಮನೆ ನಿರ್ವಿುಸಿಕೊಟ್ಟಿದೆ. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಆರೋಪಿಸಿದರು.


ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಕ್ರಮಣದಾರರಿಗೆ ಯಾವುದೇ ಅನ್ಯಾಯವಾಗದಂತೆ ನಾವು ಬೆಂಬಲವಾಗಿರುತ್ತೇವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಂದ ರಾಜ್ಯದ ಅರಣ್ಯ ಪ್ರದೇಶದಲ್ಲಿ ವಾಸಿಸುವಂತಹ ಅತಿಕ್ರಮಣದಾರರಿಗೆ ಅನ್ಯಾಯವಾಗುತ್ತಿದೆ.

ಅರಣ್ಯ ಸಚಿವ ಖಂಡ್ರೆ ಅವರಿಗೆ ಅರಣ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಒಮ್ಮೆ ನಮ್ಮ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರೆ ಇಲ್ಲಿಯ ಅನುಭವ ಅವರಿಗೆ ಆಗಲಿದೆ ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ ಈ ಹಿಂದೆ ಹೇಳಿದ್ದು ಈಗ ನಿಜವಾಗಿದೆ. ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅರಣ್ಯವಾಸಿಗಳ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ನಾವೆಲ್ಲರೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಸಂಘಟಿತವಾಗಿ ಅವರ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net