ಹತ್ತು ಲಕ್ಷ ಗಿಡಗಳನ್ನು ನೆಡುವ ಗುರಿ

28SND-02
ಸಿಂಧನೂರಿನ ಗಂಗಾನಗರದ 40ನೇ ಉಪಕಾಲುವೆ ಅಬುಬಕ್ಕರ್ ಮಸ್ಜಿದ್ ಸರ್ಕಲ್‌ನಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ವತಿ ಮಹಿಳಾ ಘಟಕದ ಅಂಗ ಸಂಸ್ಥೆ ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್‌ನಿಂದ 150 ಗಿಡಗಳನ್ನು ನೆಡಲಾಯಿತು. ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಾಂಗ್ರೆಸ್ ಪ್ರಮುಖ ಅಶೋಕ ಉಮಲೂಟಿ, ನಗರಸಭೆ ಸದಸ್ಯ ಶಬ್ಬೀರ್ ಅಹ್ಮದ್ ಇದ್ದರು.
Published on

ಸಿಂಧನೂರು: ಇಲ್ಲಿನ ಗಂಗಾನಗರದ 40ನೇ ಉಪಕಾಲುವೆ ಅಬುಬಕ್ಕರ್ ಮಸ್ಜಿದ್ ಸರ್ಕಲ್‌ನಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಅಂಗಸಂಸ್ಥೆ ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್‌ನಿಂದ ‘ಮಕ್ಕಳ ಕೈಗಳು ಮಣ್ಣಿನೊಂದಿಗೆ ಮಕ್ಕಳ ಹೃದಯ ಭಾರತದೊಂದಿಗೆ’ ಅಭಿಯಾನದಡಿ 150 ಗಿಡಗಳನ್ನು ನೆಡಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನಿಯಾ ಅಧ್ಯಕ್ಷ ಮಹ್ಮದ್ ಹುಸೇನಸಾಬ್ ಮಾತನಾಡಿ, ದೇಶದಲ್ಲಿ 10 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಈಗಾಗಲೇ ಸಿಂಧನೂರು ಘಟಕದಿಂದ ಕಳೆದೊಂದು ತಿಂಗಳಿಂದ ತಾಲೂಕಿನ ವಿವಿಧೆಡೆ ಒಂದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್ ಮಾತನಾಡಿ, ನಾವು ಮನುಷ್ಯರು ಸ್ವಾರ್ಥಿಗಳು. ಆದರೆ, ಗಿಡಗಳು ನಿಸ್ವಾರ್ಥದಿಂದ ಶುದ್ಧ ಗಾಳಿ, ಹಣ್ಣು ಹಂಪಲು ನೀಡಿ ಮನುಷ್ಯರ ಜೀವನಕ್ಕೆ ಅನುಕೂಲ ಮಾಡುತ್ತವೆ ಎಂದರು.

ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಾಂಗ್ರೆಸ್ ಪ್ರಮುಖ ಅಶೋಕ ಉಮಲೂಟಿ, ನಗರಸಭೆ ಸದಸ್ಯ ಶಬ್ಬೀರ್ ಅಹ್ಮದ್, ಪ್ರಮುಖರಾದ ಮಹ್ಮದ್ ಅಬುಲೈಸ್ ನಾಯ್ಕ, ರಾಜಾಹುಸೇನ ಹಿಮಾಯತಿ, ಇಮ್ತಿಯಾಜ್, ಅಶ್ಫಾಕ್ ಅಹ್ಮದ್, ನೂರ್ ಇಸ್ಮಾಯಿಲ್ ಗಡಿಗಿ, ಮಹಿಳಾ ಘಟಕದ ಪದಾಧಿಕಾರಿಗಳಾದ ಸುಮಯ್ಯ ಬೇಗಂ, ರಿಜ್ವಾನಾ ಬೇಗಂ, ಲುಬ್ನಾಬೆಳಗಾಮಿ, ಸೈದಾಬೇಗಂ, ಖಮರ್ ಸುಲ್ತಾನಾ, ಸಾಜಿಯಾ ಬೇಗಂ, ಆಶ್ಮಾ ಬೇಗಂ, ನಾಜಿಯ ಪರವೀನ್, ಶಹಜಾನ ಬೇಗಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net