ದಳಪತಿ ವಿಜಯ್​ ವಿರುದ್ಧ 'ಫತ್ವಾ' ಹೊರಡಿಸಿದ ಇಸ್ಲಾಮಿಕ್​ ಧರ್ಮಗುರು| Vijay

Thalapathy Vijay
Published on

Vijay: ನಟ ಹಾಗೂ ತಮಿಳುನಾಡು ವಿಕ್ಟರಿ ಪಾರ್ಟಿ ನಾಯಕ ಆದಂತಹ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಅಖಿಲ ಭಾರತ ಮುಸ್ಲಿಂ ಜಮಾತ್‌ನ ನಾಯಕ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಇಸ್ಲಾಮಿಕ್ ಧಾರ್ಮಿಕ ಶಾಸನ (ಫತ್ವಾ) ಹೊರಡಿಸಿದ್ದಾರೆ.

ಬರೇಲಿ ಹೇಳಿದ್ದೇನು?

ನಟ ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಿದಾಗಿನಿಂದ ಮುಸ್ಲಿಮರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಅಂದಹಾಗೆ ಅವರ ಸಿನಿಮಾಗಳು ಮುಸ್ಲಿಮರನ್ನು ಉಗ್ರಗಾಮಿಗಳಂತೆ ಬಿಂಬಿಸಿವೆ ಮತ್ತು ಅವರನ್ನುತಪ್ಪಾದ ರೀತಿಯಲ್ಲಿ ತೋರಿಸಿವೆ. ಅವರು ಆಯೋಜಿಸಿದ್ದ ಇಫ್ತಾರ್ ಕಾರ್ಯಕ್ರಮಕ್ಕೆ ಜೂಜುಕೋರರು ಮತ್ತು ಮದ್ಯಪಾನ ಮಾಡುವವರನ್ನು ಆಹ್ವಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವಿಜಯ್ ಅವರನ್ನು "ಮುಸ್ಲಿಂ ವಿರೋಧಿ" ಎಂದು ಆರೋಪಿಸಿದ್ದು, ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಅವರ ಇಫ್ತಾರ್ ಕೂಟವನ್ನು ಧಾರ್ಮಿಕ ಭಾವನೆಯ ಮರೆಮಾಚುವ ರಾಜಕೀಯ ತಂತ್ರ ಎಂದು ಟೀಕಿಸಲಾಗಿದೆ.

ವಿಜಯ್ ಅವರ ದಿ ಬೀಸ್ಟ್ ಚಿತ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ದಿ ಬೀಸ್ಟ್ ಚಿತ್ರದಲ್ಲಿ ಅವರು ಮುಸ್ಲಿಮರು ಮತ್ತು ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆ ಮತ್ತು ಉಗ್ರಗಾಮಿತ್ವದೊಂದಿಗೆ ಜೋಡಿಸಿದ್ದಾರೆ. ಸಿನಿಮಾದಲ್ಲಿ ವಿಜಯ್​ ಮುಸ್ಲಿಮರನ್ನು ರಾಕ್ಷಸರು ಮತ್ತು ದೆವ್ವಗಳು ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಈಗ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದರಿಂದ ಮತಗಳನ್ನು ಪಡೆಯಲು ಅವರು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ ಎಂದು ಬರೇಲ್ವಿ ಆರೋಪಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳ ಪಾವಿತ್ರ್ಯತೆಯನ್ನು ವಿಜಯ್ ಹಾಳು ಮಾಡಿದ್ದಾರೆ. ಕುಡುಕರು, ಗಲಭೆಕೋರರು, ಜೂಜುಕೋರರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದಾರೆ. ಅವರೆಲ್ಲಾ ಉಪವಾಸವನ್ನು ಮಾಡುವುದಿಲ್ಲ, ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುವುದಿಲ್ಲ ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಕಿಡಿಕಾರಿದ್ದಾರೆ.

ಫತ್ವಾದಲ್ಲಿ ಮದ್ಯಪ್ರಿಯರು ಮತ್ತು ಜೂಜುಕೋರರನ್ನು ಇಫ್ತಾರ್‌ಗೆ ಆಹ್ವಾನಿಸುವುದು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ತಮಿಳುನಾಡಿನ ಮುಸ್ಲಿಮರು ಅಂತಹ ವ್ಯಕ್ತಿಗಳನ್ನು ತಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಸೇರಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಏನಿದು ಪ್ರಕರಣ?

(ಏಜೆನ್ಸೀಸ್)

ಮಾರ್ಚ್ 8ರಂದು ಚೆನ್ನೈನ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ತಲೆಗೆ ಟೋಪಿ ಧರಿಸಿದ್ದ ವಿಜಯ್, ಸಂಜೆಯ ನಮಾಜ್​ನಲ್ಲಿ ಭಾಗವಹಿಸಿದ್ದರು. ಇದರ ಆಯೋಜನೆಯ ಬಗ್ಗೆ ಮಾರ್ಚ್ 11ರಂದು ಪೊಲೀಸರಿ ದೂರು ನೀಡಲಾಗಿತ್ತು. ನೀವು ಸಿನಿಮಾದಲ್ಲಿ ಕುಡಿಯುತ್ತೀರಿ, ಧೂಮಪಾನ ಮಾಡುತ್ತೀರಿ. ಇಫ್ತಾರ್ ಕೂಟದ ಹಿನ್ನಲೆ ಏನು ಎನ್ನುವುದು ನಿಮಗೆ ಗೊತ್ತಿದೆಯೇ? ಒಂದು ದಿನ ತಲೆಗೆ ಟೋಪಿ ಹಾಕಿಕೊಂಡು ನಮಾಜ್ ಮಾಡಿದರೆ, ನೀವು ಅಲ್ಪಸಂಖ್ಯಾತರ ಪರ ಇದ್ದೀರಿ ಎಂದು ನಂಬಲು ಸಾಧ್ಯವೇ ಎಂದು ವಿಜಯ್​ ವಿರುದ್ಧ ಆರೋಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net