ಪ್ರಜಾಪ್ರಭುತ್ವದ ಹಿರಿಮೆ ಹೆಚ್ಚಿಸಿದ ನಾಮನಿರ್ದೇಶನ

web 4
Published on

ಕಸ ಗುಡಿಸುತ್ತಿದ್ದಾತ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದ ಯುವಕ ಈಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ನಾಮನಿರ್ದೇಶನಗೊಂಡಿದ್ದು, ಪ್ರಜಾಪ್ರಭುತ್ವದ ಸೌಂದರ್ಯ ಮತ್ತೊಮ್ಮೆ ನಿರೂಪಿತವಾಗಿದೆ.

ಶಾಂತಿನಗರದ ಮೊಹಮ್ಮದ್ ಹಮೀಮ್ ಈಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕವಾಗಿದ್ದಾರೆ. ಇವರ ಜತೆಗೆ ವೆಂಕಟೇನಹಳ್ಳಿ ವಿ.ಸುರೇಶ್, ಗೇರೆಹಳ್ಳಿ ನಾರಾಯಣಮ್ಮ, ದಿನ್ನೇಹೊಸಹಳ್ಳಿ ಪೆದ್ದಣ್ಣರನ್ನು ನೇಮಿಸಲಾಗಿದೆ.

ಹಿಂದೆ ನಗರಸಭೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಸಂದರ್ಭದಲ್ಲೂ ಶಾಸಕ ಪ್ರದೀಪ್ ಈಶ್ವರ್ ಶಿಫಾರಸಿನಂತೆ ಅಹಿಂದ ವರ್ಗಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು. ಈಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಾಗಿಲು ತೆಗೆದು, ಕಸ ಗುಡಿಸುತ್ತಿದ್ದ ಯುವಕನಿಗೂ ಹುದ್ದೆ ನೀಡಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಪಕ್ಷದ ಪರ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಎಂಬ ಸಂದೇಶವೂ ರವಾನೆಯಾಗಿದೆ.

"ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿರುವುದು ಶ್ಲಾಘನೀಯ. ಇದರಿಂದ ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವರಿಗೆ ಒಳ್ಳೆಯ ಅವಕಾಶ ಸಿಗುವ ಸಂದೇಶ ಸಾರಿದಂತಾಗಿದೆ." - ಆದಿನಾರಾಯಣ, ಜಿಲ್ಲಾ ಕಾಂಗ್ರೆಸ್ ವಕ್ತಾರ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net