

ಸರಗೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಮಾಸ್ತಮ್ಮ ದೇವಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಕಬಿನಿ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ವಿಗ್ರಹ ಹೊತ್ತು ಸಂಚರಿಸಲಾಯಿತು.
ಮಾಸ್ತಮ್ಮ ದೇವಿ ದೇಗುಲದ ಮುಂಭಾಗ ಎಲ್ಲ ಸಮುದಾಯದವರು ಸೇರಿ ಕೊಂಡೋತ್ಸವ ಸಿದ್ಧಪಡಿಸಿದರು. ನಂತರ ಉತ್ಸವ ಮೂರ್ತಿಯನ್ನು ದೇವಾಲಯ ಮುಂಭಾಗ ತಂದು ವಿವಿಧ ಪೂಜೆ ನೆರವೇರಿಸಿ ಕೊಂಡೋತ್ಸವಕ್ಕೆ ಅನುವು ಮಾಡಿಕೊಡಲಾಯಿತು. ನೂರಾರು ಭಕ್ತರು ಕೊಂಡ ಹಾಯ್ದು ಭಕ್ತಿ ಮೆರೆದರು. ಕೊಂಡಕ್ಕೆ ಉಪ್ಪು, ಅರಳು ಸುರಿಯುವ ಮೂಲಕ ಭಕ್ತರು ಹರಕೆ ಸಲ್ಲಿಸಿದರು.
ಸರಗೂರು ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸರಗೂರು ಠಾಣಾ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಟಿ.ಕರಿಯಪ್ಪ ಮಾಸ್ತಮ್ಮ ಜಾತ್ರಾ ಮಹೋತ್ಸವ ನೇತೃತ್ವ ವಹಿಸಿದ್ದರು. ಪ.ಪಂ.ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸದಸ್ಯ ಶ್ರೀನಿವಾಸ, ಚಂದ್ರಿಕಾ ರಾಜಣ್ಣ, ಚೈತ್ರ ಸ್ವಾಮಿ, ನೂರಳಾಸ್ವಾಮಿ, ನಾಡುದೇಶದ ಯಜಮಾನ ಗಣೇಶ, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್. ಎನ್. ನಾಗರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಆದಿಕರ್ನಾಟಕ ಸಮಾಜದ ಯಜಮಾನ ರಂಗಯ್ಯ, ಸಣ್ಣನಾಯಕ, ವೆಂಕಟೇಶ್, ಮಹದೇವ, ನಾಗಶಟ್ಟಿ, ರಾಜೇಶ್, ಬೆಟ್ಟನಾಯಕ, ನವೀನ್, ಹೆಜ್ಜೂರಯ್ಯ, ನಾಗರಾಜು, ಪಟ್ಟಣದ ಎಲ್ಲ ಜನಾಂಗದ ಯಜಮಾನರು ಇತರರು ಇದ್ದರು.