ವಿಜೃಂಭಣೆಯ ಸಿದ್ದಪ್ಪಾಜಿ ಕೊಂಡೋತ್ಸವ

ವಿಜೃಂಭಣೆಯ ಸಿದ್ದಪ್ಪಾಜಿ ಕೊಂಡೋತ್ಸವ
Published on

ಹನೂರು: ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಿದ್ದಪ್ಪಾಜಿ ಹಬ್ಬದ ಕೊಂಡೋತ್ಸವವು ವಿಜೃಂಭಣೆಯಿಂದ ಜರುಗಿತು.

ಹಬ್ಬದ ಹಿನ್ನೆಲೆ ಶ್ರೀ ಘನನೀಲಿ ಸಿದ್ದಪ್ಪಾಜಿ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ಕುರುಬನಕಟ್ಟೆ ಕ್ಷೇತ್ರದ ಶ್ರೀ ವರುಣ್ ಲಿಂಗರಾಜೇ ಅರಸ್ ಸಮ್ಮುಖದಲ್ಲಿ ದೇಗುಲದ ಮುಂಭಾಗದಲ್ಲಿ ಕಂಡಾಯವನ್ನು ಹೊತ್ತ ಅರ್ಚಕರು ಕೊಂಡವನ್ನು ಹಾಯ್ದು ಭಕ್ತಿ ಪರಕಾಷ್ಠೆ ಮೆರೆದರು. ಈ ವೇಳೆ ನೆರೆದಿದ್ದ ಭಕ್ತರು ಜಯಘೋಷಗಳನ್ನು ಕೂಗಿದರು.

ಗ್ರಾಮದ ಬಸವನಗುಡಿ ಬಳಿ ಕಂಡಾಯಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದ ಅರ್ಚಕರು ಗ್ರಾಮಸ್ಥರೊಂದಿಗೆ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಹಿಳೆಯರು ಕಂಡಾಯಗಳಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ನಮಿಸಿದರು. ಈ ವೇಳೆ ಯುವಕರು ತಮಟೆ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net