

ಸಿದ್ದಾಪುರ: ಗ್ರಾಮದ ಶ್ರೀ ವೀರಪ್ಪಯ್ಯ ಸ್ವಾಮಿ ದೇವಸ್ಥಾನದಲ್ಲಿ ಗಜಾನನ ಯುವಕರ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನುಸೋಮವಾರ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.
ಬೆಳಗ್ಗೆ ದೇವಸ್ಥಾನದಲ್ಲಿ ಗಣಪನಿಗೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರ ವೀರಭದ್ರೇಶ್ವರ, ಭದ್ರಕಾಳಿ, ಶಿವನ ವೇಷ ತೊಟ್ಟ ಬೆಂಕಿ ಹಚ್ಚಿದ ಕರ್ಪೂರ ಬಾಯಿಯಲ್ಲಿ ಹಾಕಿಕೊಳ್ಳುವುದು, ಮಿಚ್ಚಣಿಕೆ ಮೇಲಿನ ನೃತ್ಯ, ಒಡಪು ಹೇಳುವುದು ಸೇರಿ ವಿವಿಧ ಕಲೆಗಳ ಮೂಲಕ ನೋಡುಗರ ಗಮನ ಸೆಳೆದರು. ಕಳಸ ಹಾಗೂ ಜನಪದ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣಪತಿ ಮೂರ್ತಿ ಮೆರವಣಿಗೆ ಮಾಡಲಾಯಿತು.
ಪ್ರಮುಖರಾದ ಗಣೇಶ ತಾತಾ ಹಿರೇಮಠ, ವಿನಯ್ ಕುಮಾರ್ ಹಿರೇಮಠ, ಅಮರಯ್ಯ ಸ್ವಾಮಿ, ಕಾರ್ತಿಕ್ ಕುಮಾರ್, ಹಳದಪ್ಪ, ಮಂಜುನಾಥ ಹುಂಡೆಕರ್, ಅಯ್ಯಪ್ಪ, ದಯಸ್ವಾಮಿ, ರಾಜಶೇಖರ ಮಠಪತಿ, ರಂಗನಗೌಡ, ಬಸವರಾಜ, ಆಕಾಶ್ ಕುಮಾರ್, ಬಸಲಿಂಗಪ್ಪ ಹೊಸಮನಿ, ಅಮರೇಶ, ಬಸವರಾಜ ಹುಡೇದ್, ಮಂಜುನಾಥ ಚಿಕ್ಕನಗೌಡ್ರು ಇತರರಿದ್ದರು.