More

    ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿ ಮೂರ್ತಿ ವಿಸರ್ಜನೆ

    ಕೊಡಗು : ಸುಂಟಿಕೊಪ್ಪ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಮತ್ತು ಗೌರಿ,ಗಣೇಶೋತ್ಸವ ಆಚರಣಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ 58ನೇ ವರ್ಷದ ಗೌರಿ, ಗಣೇಶ ಮೂರ್ತಿಯನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜಿಸಲಾಯಿತು.


    11 ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ಗೌರಿ,ಗಣೇಶ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಗಾರಿ, ಬ್ಯಾಂಡ್, ವೀರಗಾಸೆ, ಡಿಜೆ ಹಾಗೂ ವಾದ್ಯಗೋಷ್ಠಿಯೊಂದಿಗೆ ಸುಂಟಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವರುಣನ ಆರ್ಭಟವನ್ನು ಲೆಕ್ಕಿಸದ ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


    ಆರ್ಚಕರಾದ ದರ್ಶನ್ ಬಾರಿತ್ತಾಯ, ಮನೋಜ್ ಭಟ್, ಕೃಷ್ಣಭಟ್, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ವಾಸುದೇವ, ಉಪಾಧ್ಯಕ್ಷ ಬಿ.ಕೆ.ಪ್ರಶಾಂತ್ (ಕೊಕ), ಪಿ.ಲೋಕೇಶ್,ಪೃಥ್ವಿರಾಜ್, ಖಜಾಂಜಿ ಎಚ್.ಬಿ.ಈಶ್ವರ, ಕಾರ್ಯದರ್ಶಿಗಳಾದ ಬಿ.ಕೆ.ರಂಜಿತ್, ಪುನೀತ್‌ಕುಮಾರ್, ಬಿ.ಕೆ.ಸೂರ್ಯ, ಎಂ.ಎಚ್.ನಿಖಿಲ್, ಸಂಘಟನಾ ಕಾರ್ಯದರ್ಶಿಗಳಾದ ಎಂ.ಗಣೇಶ್, ಎಂ.ಪಾಂಡ್ಯನ್, ನವೀನ್, ಕೆ.ಮಧು, ರಿತೀಕ್, ಶಶಿಕಾಂತ್, ಅಶ್ವತ್ಥ, ಪಿ.ಸಿ.ಸುನಿಲ್‌ಕುಮಾರ್, ಬಿ.ಎ.ಶ್ರೀರಾಮ್, ಟಿ.ಕೆ.ರಾಕೇಶ್, ಶಾಂತರಾಮ್ ಕಾಮತ್, ಸುರೇಶ್ ಗೋಪಿ, ಧನು ಕಾವೇರಪ್ಪ, ಪಿ.ಆರ್.ಸುನಿಲ್‌ಕುಮಾರ್, ಎಂ.ಆಜ್.ಶಶಿ, ಪಟ್ಟೆಮನೆ ಸದಾಶಿವ, ಪಟ್ಟೆಮನೆ ಉದಯಕುಮಾರ್, ಎ.ಲೋಕೇಶ್‌ಕುಮಾರ್, ಬಿ.ಬಿ.ಭಾರತೀಶ್, ಬಿ.ಕೆ.ಮೋಹನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts